ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ಸಲ್ಲಿಕೆಯಾಗಿದ್ದು, ಇದೀಗ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು FIR ದಾಖಲಾಗಿದೆ. ಸಂತ್ರಸ್ತ ಮಹಿಳೆಯ ಪತಿ ಸಿಐಡಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ನಿನ್ನೆ ಹಾಸನ ಮೂಲದ ಸಿಐಡಿಗೆ ನೊಂದ ಮಹಿಳೆಯ ಪತಿಯಿಂದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ಸಲ್ಲಿಸಿದ್ದಾರೆ. ದೂರು ಆಧರಿಸಿ ಇದೀಗ ಸಿಐಡಿ ಅಧಿಕಾರಿಗಳು FIR ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ನಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಎ 1 ಆರೋಪಿ ಎಂದು ಹೇಳಲಾಗುತ್ತಿದೆ.
ಈ ವೇಳೆ ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದು, ಮಗಳ ಓದಿನ ಬಗ್ಗೆ ಸಂತ್ರಸ್ತ ಮಹಿಳೆ ಸಹಾಯ ಕೇಳಿದ್ದಳು. ಹಾಸನದ ಸಂಸದರ ಮನೆಗೆ ಬರುವಂತೆ ತಿಳಿಸಿದರು. ಬೇರೆಯವರನ್ನ ಕಳಿಸಿ ನಮ್ಮನ್ನು ಮಾತ್ರ ಇರುವಂತೆ ಹೇಳಿದ್ದರು. ನಂತರ ರೂಮಿಗೆ ಕರೆದೋಯ್ದು ಅತ್ಯಾಚಾರಕ್ಕೆ ಯತ್ನಿಸಿದರು. ನಿನ್ನ ಪತಿಗೆ ಕಡಿಮೆ ಮಾತಾಡಲು ಹೇಳು ಇಲ್ಲ ಅಂದರೆ ಸರಿ ಇರಲ್ಲ. ನನ್ನ ಬಳಿ ಗನ್ ಇದೆ ನಾವು ಹೇಳಿದಂತೆ ಕೇಳದಿದ್ದರೆ ಪತಿಯನ್ನು ಮುಗಿಸುವೆ ಎಂದು ನನಗೆ ಬೆದರಿಕೆ ಹಾಕಿದ್ದರು.
ಅದಕ್ಕೆ ನಾನು ಹೆದರಿಕೊಂಡು ಸುಮ್ಮನೆ ಕುಳಿತುಕೊಂಡೆ. ನಂತರ ನನ್ನ ಮೇಲೆ ಪ್ರಜ್ವಲ್ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಎಸಗಿದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದರು.ವಿಡಿಯೋದಲ್ಲಿ ನನ್ನ ಮುಖ ಇಲ್ಲ ಈ ವಿಚಾರ ಹೇಳಿದರೆ ವಿಡಿಯೋ ವೈರಲ್ ಮಾಡುವ ಬೆದರಿಕೆ ಕೂಡ ಹಾಕಿದ್ದರು ಎಂದು ಮಹಿಳೆ ದೂರು ಸಲ್ಲಿಸಿದ್ದಾಳೆ ಇದೀಗ ಸಂತ್ರಸ್ತ ಮಹಿಳೆ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.