ಮೈಸೂರು : ಭಾರತ್ ಜೋಡೋ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಬೇಗೂರಿನಿಂದ ತಾಂಡವಪುರಕ್ಕೆ ಪಾದಯಾತ್ರೆ ನಡೆಯಲಿದ್ದು, ಗುಂಡ್ಲುಪೇಟೆ ಬೇಗೂರಿನ ತೊಂಡವಾಡಿ ಗೇಟ್ ನಿಂದ ಯಾತ್ರೆ ಪ್ರಾರಂಭವಾಗಿದೆ.
ಭಾರತ್ ಜೋಡೋ ಯಾತ್ರೆ ಚಾಮರಾಜನಗರದಿಂದ ಮೈಸೂರು ನಗರಕ್ಕೆ ಎಂಟ್ರಿ ಕೊಟ್ಟಿದೆ. ಶನಿವಾರ 24 ಕಿ ಲೋ ಮೀಟರ್ ಪಾದಯಾತ್ರೆ ನಡೆಯಲಿದೆ. ಎರಡನೇ ದಿನದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಒಟ್ಟು 25 ಕಿಮೀ ಹೆಜ್ಜೆ ಹಾಕಲಿದ್ದಾರೆ. ರಾಹುಲ್ ಗಾಂಧಿ ಜೊತೆಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ10 ವಿಧಾನಸಭಾ ಕ್ಷೇತ್ರಗಳಿಂದ ಆಗಮಿಸಲಿರುವ ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆ ಹಾಕಲಿದ್ದಾರೆ.
ಇಂದು ಬೆಳಗ್ಗೆ 7.40 ಕ್ಕೆ ಯಾತ್ರ ಪ್ರಾರಂಭವಾಗಿದ್ದು, ಬೆಳಿಗ್ಗೆ 11.00 ಗಂಟೆಗೆ ಕಳಲೆ ಗೇಟ್ ಬಳಿ ವಿರಾಮ ಇರಲಿದೆ.ಈ ವೇಳೆಯಲ್ಲಿ ರಾಹುಲ್ ಗಾಂಧಿ ಅವರು ಸಾಹಿತಿ, ಕಲಾವಿದರ ಜೊತೆ ಸಂವಾದ ನಡೆಸಲಿದ್ದಾರೆ. ಸಂವಾದ ಬಳಿಕ ವಿಶ್ರಾಂತಿ ಇರಲಿದ್ದು, 4 ಗಂಟೆ ಸುಮಾರಿಗೆ ಕಳಲೆ ಗೇಟ್ ನಿಂದ ಯಾತ್ರೆ ಪುನಾರಂಭ ಆಗಲಿದೆ. ಸಂಜೆ 7 ಗಂಟೆವರೆಗೂಪಾದಯಾತ್ರೆ ನಡೆಯಲಿದೆ. ಚಿಕ್ಕಯ್ಯನ ಛತ್ರದ ಗೇಟ್ ಬಳಿ ಎರಡನೇ ದಿನದ ಯಾತ್ರೆ ಮುಕ್ತಾಯವಾಗಲಿದ್ದು, ತಾಂಡವಪುರ ಎಂಐಟಿ ಕಾಲೇಜ್ ಗೇಟ್ ಬಳಿ ವಾಸ್ತವ್ಯ ಹೂಡಲಿದ್ದಾರೆ.