ಬೆಂಗಳೂರು : ಬೆಂಗಳೂರಿನಲ್ಲಿ ಮಹಾಮಳಗೆ ಮತ್ತೊಂದು ಅವಘಡ ಸಂಭವಿಸಿದ್ದು, ರಾಜರಾಜೇಶ್ವರಿ ನಗರದಲ್ಲಿ ಬೃಹತ್ ಗಾತ್ರದ ಬಂಡೆ ಕುಸಿದಿರುವ ಘಟನೆ ನಡೆದಿದೆ.
BIG NEWS: ಮುಂಬರುವ ಹಬ್ಬಗಳಿಗಾಗಿ ಈಗಿನಿಂದಲೇ ಸಜ್ಜು: 16,000 ಉದ್ಯೋಗಿಗಳ ನೇಮಕಕ್ಕೆ ʻMyntraʼ ಭರ್ಜರಿ ಪ್ಲ್ಯಾನ್!
ರಾಜರಾಜೇಶ್ವರಿ ನಗರದ ಗಿರಿಧಾಮ ಬಡವಾವಣೆಯಲ್ಲಿ ಬೃಹತ್ ಗಾತ್ರದ ಬಂಡೆ ಕುಸಿದಿದ್ದು, ಭೂಮಿ ನಡುಗಿದೆ. ಗಿರಿಧಾಮ ಬಡಾವಣೆಯ ಮನೆಯೊಂದರ ಬಳಿ ಬಂಡೆ ಬಿದ್ದಿದ್ದು, ಈ ಬಂಡೆ ಸುಮಾರು 20 ಟನ್ ತೂಕ ಇದೆ ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.
ಬೃಹತ್ ಬಂಡೆ ಬಿದ್ದಿದ್ದರೂ ಯಾವ ಅಧಿಕಾರಿಗಳೂ ಇನ್ನೂ ಸ್ಥಳಕ್ಕೆ ಆಗಮಿಸಿಲ್ಲ. ಆ ಜಾಗ ಪುರತತ್ವ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಹೇಳುತ್ತಿದೆ ಎಂದು ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಬಂಡೆ ಕುಸಿತದಿಂದ ಅಕ್ಕಪಕ್ಕದ ನಿವಾಸಿಗಳು ಆತಂಕದಲ್ಲಿದ್ದಾರೆ.
BREAKING NEWS : ಬೆಳ್ಳಂಬೆಳಗ್ಗೆ ರಾಮನಗರ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವ : ಜನರಲ್ಲಿ ಆತಂಕ