ಕತಾರ್ : ಕತಾರ್ನಲ್ಲಿ ಸೋಮವಾರ ಇಂಗ್ಲೆಂಡ್ ವಿರುದ್ಧ ನಡೆದ ವಿಶ್ವಕಪ್’ನ ಆರಂಭಿಕ ಪಂದ್ಯಕ್ಕೂ ಮುನ್ನ ಇರಾನ್ ಆಟಗಾರರು ತಮ್ಮ ರಾಷ್ಟ್ರಗೀತೆಯನ್ನ ಹಾಡಲು ನಿರಾಕರಿಸಿದ್ದಾರೆ. ಇರಾನ್ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನಾಕಾರರನ್ನ ಬೆಂಬಲಿಸಿ ರಾಷ್ಟ್ರಗೀತೆಯನ್ನ ಹಾಡಲು ನಿರಾಕರಿಸಬೇಕೇ ಅಥವಾ ಬೇಡವೇ ಎಂಬುದನ್ನ ತಂಡವು “ಸಾಮೂಹಿಕವಾಗಿ” ನಿರ್ಧರಿಸುತ್ತದೆ ಎಂದು ತಂಡದ ನಾಯಕಿ ಅಲಿರೆಜಾ ಜಹಾನ್ಬಕ್ಷ್ ಹೇಳಿದ್ದಾರೆ.
ಇದಕ್ಕೂ ಮುನ್ನ ನವೆಂಬರ್ನಲ್ಲಿ ದುಬೈನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ಪಂದ್ಯದ ಆರಂಭದಲ್ಲಿ ರಾಷ್ಟ್ರೀಯ ಬೀಚ್ ಫುಟ್ಬಾಲ್ ತಂಡವು ರಾಷ್ಟ್ರಗೀತೆಯನ್ನು ಹಾಡಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಂದ್ಯದ ವೇಳೆ ಸಯೀದ್ ಪಿರಮೂನ್ ಅವ್ರು ಇರಾನ್ನಲ್ಲಿ ಪ್ರತಿಭಟನಾಕಾರರೊಂದಿಗೆ ಒಗ್ಗಟ್ಟಿನ ಪ್ರದರ್ಶನವಾಗಿ ಸಾಂಕೇತಿಕವಾಗಿ ಗೋಲ್ ಗಳಿಸಿದ ನಂತರ ತಮ್ಮ ಕೂದಲನ್ನ ಕತ್ತರಿಸಿಕೊಂಡರು. ಇದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ, 48,000 ಸಂಬಳ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮವೇ ನಡೆದಿಲ್ಲ ಅಂದ್ರೇ ತನಿಖೆ ಯಾಕೆ – ಸಿದ್ಧರಾಮಯ್ಯ ಪ್ರಶ್ನೆ