ಕೆಎನ್ಎನ್ಡಿಜಿಟಲ್ ಡೆಸ್ಕ್ : ಬಾಂಗ್ಲಾದೇಶವನ್ನ ಸೋಲಿಸುವ ಮೂಲಕ ಭಾರತ ತಂಡ ಅಂಧರ ಕ್ರಿಕೆಟ್ನ T20 ವಿಶ್ವಕಪ್ ಪ್ರಶಸ್ತಿ ಬಾಚಿಕೊಂಡಿದೆ. 120 ರನ್ಗಳ ಭರ್ಜರಿ ಜಯ ಸಾಧಿಸಿದೆ ಟೀಂ ಇಂಡಿಯಾ, ಸತತ ಮೂರನೇ ಬಾರಿ ವಿಶ್ವಕಪ್ ಟ್ರೋಫಿ ವಶಪಡಿಸಿಕೊಂಡಿದೆ. ಇದರೊಂದಿಗೆ ಟೀಂ ಇಂಡಿಯಾ 2012ರಲ್ಲಿ ಹಾಗೂ 2017ರಲ್ಲಿ ಪ್ರಶಸ್ತಿ ಜಯಿಸಿತ್ತು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 3 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಆಟಗಾರರು ಅತ್ಯುತ್ತಮ ಆಟ ಪ್ರದರ್ಶಿಸಿದರು. ಭಾರತ ತಂಡದ ಪರ ಸುನಿಲ್ ರಮೇಶ್ ಮತ್ತು ಅಜಯ್ ಕುಮಾರ್ ರೆಡ್ಡಿ ಬಿರುಸಿನ ಶತಕ ಬಾರಿಸಿದರು. ಅವರಿಂದಲೇ ಟೀಂ ಇಂಡಿಯಾ ದೊಡ್ಡ ಮೊತ್ತ ತಲುಪಲು ಸಾಧ್ಯವಾಯಿತು. ಸುನಿಲ್ ರಮೇಶ್ 136 ರನ್ ಮತ್ತು ಅಜಯ್ ಕುಮಾರ್ 50 ಎಸೆತಗಳಲ್ಲಿ 100 ರನ್ ಗಳಿಸಿದರು. ಅವರ ಅದ್ಭುತ ಇನ್ನಿಂಗ್ಸ್ಗಾಗಿ ಸುನೀಲ್ ರಮೇಶ್ಗೆ ‘ಪಂದ್ಯ ಶ್ರೇಷ್ಠ’ಪ್ರಶಸ್ತಿ ನೀಡಲಾಯಿತು.
ಬಾಂಗ್ಲಾದೇಶ ಬ್ಯಾಟ್ಸ್ಮನ್ಗಳು ಸೋತರು
278 ರನ್ ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಭಾರತದ ಬೌಲರ್’ಗಳ ಮುಂದೆ ನಿಲ್ಲಲಾಗದೇ 20ರಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಗಿ 120 ರನ್ ಗಳಿಂದ ಸೋಲನುಭವಿಸಿತು. ಬಾಂಗ್ಲಾದೇಶದ ಆರಂಭಿಕ ಆಟಗಾರ ಸಲ್ಮಾನ್ 77 ರನ್ಗಳ ಇನ್ನಿಂಗ್ಸ್ ಆಡಿದರು, ಆದರೆ ಅವರು ತಂಡವನ್ನ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಅಜಯ್ ಕುಮಾರ್ ರೆಡ್ಡಿ ಮತ್ತು ಲಲಿತ್ ಮೀನಾ 1-1 ವಿಕೆಟ್ ಪಡೆದರು.
ಮೂರನೇ ಬಾರಿ ಪ್ರಶಸ್ತಿ ಗೆದ್ದ ಭಾರತ
ಅಂಧರ ಟಿ20 ವಿಶ್ವಕಪ್’ನ್ನ ಟೀಂ ಇಂಡಿಯಾ ಆಟಗಾರರು ಮೂರನೇ ಬಾರಿಗೆ ವಶಪಡಿಸಿಕೊಂಡಿದ್ದಾರೆ. ಅಂತಿಮ ಪಂದ್ಯದಲ್ಲಿ ಭಾರತದ ಆಟಗಾರರು ಅದ್ಭುತ ಆಟ ಪ್ರದರ್ಶಿಸಿದರು. ಇದಕ್ಕೂ ಮುನ್ನ ಟೀಂ ಇಂಡಿಯಾ 2012 ಮತ್ತು 2017ರಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಜಯಿಸಿತ್ತು.
‘ಚೆಕ್ ಬೌನ್ಸ್ ಕೇಸ್’ನಲ್ಲಿ ‘ಶಾಸಕ ಕೆ.ವೈ ನಂಜೇಗೌಡ’ಗೆ 49.65 ಲಕ್ಷ ದಂಡ