ಬೆಂಗಳೂರು : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದರೆ ನಾವು ಮುಂಬೈಗೆ ಹೋಗುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸಚಿವರು ಬೆಳಗಾವಿ ಅಷ್ಟೇ ಯಾಕೆ ಬೆಂಗಳೂರಿಗೂ ಬರಲಿ, ನಾವೂ ಮುಂಬೈಗೆ ಹೋಗುತ್ತೇವೆ. ಯಾರೇ ಆಗಲಿ ಜನರ ಭಾವನೆ ಕೆರಳಿಸುವ ಕೆಲಸ ಮಾಡಬಾರದು.ಯಾವ ಸಮಯ, ಯಾಕೆ ಬರಬೇಕು ಅನ್ನೋದು ಮುಖ್ಯ.ಸಚಿವರಾಗಲಿ, ಸಾಮಾನ್ಯ ಜನರಾಗಲಿ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಶಾಂತಿ ಭಂಗ ಮಾಡಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರುವುದಿಲ್ಲ ಅನಿಸುತ್ತೆ. ಒಂದು ವೇಳೆ ಬೆಳಗಾವಿಗೆ ಬಂದು ಜನರ ಭಾವನೆ ಕರಳಿಸುವ ಕೆಲಸ ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.