ಬೆಂಗಳೂರು : ನಾನು ಕೊಡಗಿಗೆ ಹೋಗಿದ್ದ ವೇಳೆ ಮಾಂಸದ ಊಟ ಮಾಡಿಲ್ಲ. ನಾನು ಕೇವಲ ಅಕ್ಕಿ ರೊಟ್ಟಿ, ಕಳಲೆ ಮಾತ್ರ ಊಟ ಮಾಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
BREAKING NEWS : ʻ ಆ. 26ರಂದು ಮಡಿಕೇರಿ ಚಲೋಗೆ ಅವಕಾಶ ಇಲ್ಲ ʼ : ಐಜಿ ಪ್ರವೀಣ್ ಮಧುಕರ್ ಸೂಚನೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೊಡಗಿಗೆ ಹೋಗಿದ್ದ ವೇಳೆ ಮಾಂಸದ ಊಟ ಮಾಡಿಲ್ಲ. ನಾನು ಕೇವಲ ಅಕ್ಕಿ ರೊಟ್ಟಿ, ಕಳಲೆ ಮಾತ್ರ ಊಟ ಮಾಡಿದ್ದೇನೆ.ಅವರು ನಾಟಿ ಕೋಳಿ ಅಡುಗೆ ಮಾಡಿದ್ದರೂ ನಾನು ತಿಂದಿಲ್ಲ. ಮಾಂಸ ತಿನ್ನುವುದು ಬಿಡುವುದು ಅವರ ವೈಯಕ್ತಿಕ ವಿಚಾರ. ಇದೊಂದು ಚರ್ಚೆ ಮಾಡುವ ವಿಚಾರವೇ ಅಲ್ಲ. ಎಷ್ಟೋ ದೇವರುಗಳಿಗೆ ಮಾಂಸದ ನೈವೇದ್ಯವನ್ನು ಮಾಡುತ್ತಾರೆ. ನಾನು ಕುರಿ, ಕೋಳಿ ಮಾಂಸ ಮಾತ್ರ ತಿನ್ನುತ್ತೇನೆ. ಬೇರೆ ಮಾಂಸ ತಿನ್ನುವುದಿಲ್ಲ. ನಾನು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ದೇವಸ್ಥಾನಕ್ಕೆ ಹೋಗಲ್ಲ ಎಂದರು.
Breaking news: ತಾಂತ್ರಿಕ ದೋಷ: ರಾಜಸ್ಥಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದ IAF ಹೆಲಿಕಾಪ್ಟರ್… ಎಲ್ಲರೂ ಸೇಫ್
ಜಿಲ್ಲಾಧಿಕಾರಿ ಆದೇಶ ಎಂದರೆ ಸರ್ಕಾರದ ಆದೇಶ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ಸರ್ಕಾರದ ಆದೇಶವನ್ನು ಪರಿಪಾಲಿಸುತ್ತೇವೆ. ಕೊಡಗು ಜಿಲ್ಲೆಯಲ್ಲಿ ನಾನು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಆಗಸ್ಟ್ 18ರಂದು ಅತಿವೃಷ್ಟಿಯಿಂದಾದ ಹಾನಿ ವೀಕ್ಷಿಸುವುದಕ್ಕಾಗಿ ಕೊಡಗು ಜಿಲ್ಲೆಗೆ ಹೋಗಿದ್ದೆ, ತಿತಿಮತಿಯಲ್ಲಿ 15-20 ಜನ ಕಪ್ಪು ಬಾವುಟ ಪ್ರದರ್ಶಿಸಿದರು ಆದರೆ ಪೊಲೀಸರು ಏನೂ ಮಾಡದೇ ಸುಮ್ಮನೆ ನಿಂತಿದ್ದರು. ಅವರು ಕಪ್ಪು ಬಾವುಟ ಕಾರಿನಲ್ಲಿ ಹಾಕಲು ಬಂದ್ರೂ ಸುಮ್ಮನಿದ್ದರು. ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಇದ್ರೂ ಸರ್ಕಾರ ಏನೂ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುಡ್ಡೆಹೊಸಳ್ಳಿ ಬಳಿಯೂ 15-20 ಯುವಕರು ಪ್ರತಿಭಟನೆ ಮಾಡಿದ್ದಾರೆ. ಮೊದಲೇ ಪ್ರತಿಭಟನ ಮಾಡಿದಾಗ ಪೊಲೀಸರು ಎಚ್ಚೆತ್ತುಕೊಳ್ಳಲಿಲ್ಲ. ಎಸ್ ಪಿ ಸುಮ್ಮನೆ ನೋಡುತ್ತ ನಿಂತುಬಿಟ್ಟಿದ್ದಾನೆ. ಇಷ್ಟೆಲ್ಲಾ ಆಗಿದ್ದರೂ ಡಿಸಿ. ಪೊಲೀಸರು ಏನೂ ಕ್ರಮ ಕೈಗೊಳ್ಳಲಿಲ್ಲ. ಇಷ್ಟೆಲ್ಲಾ ನೋಡಿದ ಮೇಲೆ ಇದು ಸರ್ಕಾರದ ಪ್ರಾಯೋಜಿತ ಪ್ರತಿಭಟನೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪ್ರತಿಭಟನೆ ವೇಳೆ ಒಂದೆರಡು ಕಡೆ ಬಟ್ಟೆಯಲ್ಲಿ ಕಲ್ಲಿಟ್ಟು ಎಸೆದಿದ್ದಾರೆ. ಅಲ್ಲಿದ್ದವರೆಲ್ಲ ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು, ಸರ್ಕಾರವೇ ನಿರ್ದೇಶನವನ್ನು ನೀಡಿ ಪ್ರತಿಭಟನೆ ಮಾಡಿಸಿದೆ. ಶಾಸಕರೂ ಕೂಡ ಕುಮ್ಮಕ್ಕು ನೀಡಿದ್ದಾರೆ. ಸಂಪತ್ ಎನ್ನುವವನು ನನ್ನ ಕಾರಿಗೆ ಮೊಟ್ಟೆ ಎಸೆದಿದ್ದ. ಸಂಪತ್ ನನ್ನು ಶಾಸಕ ಅಪ್ಪಚ್ಚು ರಂಜನ್ ಬಿಡಿಸಿಕೊಂಡು ಬಂದಿದ್ದಾರೆ ಕಿಡಿಕಾರಿದ್ದಾರೆ.