ಬಾಗಲಕೋಟೆ : ಮಗಳು ಅಂತರ್ಜಾತಿ ವಿವಾಹವಾಗಿದ್ದಳೆಂದು ಅಳಿಯನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕೋಟ ಗ್ರಾಮದಲ್ಲಿ ನಡೆದಿದೆ.
BIGG NEWS : ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭ : ಸಮರ್ಪಕ ವ್ಯವಸ್ಥೆ ಕಲ್ಪಿಸಲು ಸಭಾಪತಿ ಮಲ್ಕಾಪುರೆ ಸೂಚನೆ
ಬಾಗಲಕೋಟೆ ಜಿಲ್ಲೆಯ ಜಮಖಂಡ ತಾಲೂಕಿನ ಟಕ್ಕೋಟ ಗ್ರಾಮದಲ್ಲಿ ಡಿಸೆಂಬರ್ 17 ರಂದು ತಮ್ಮನಗೌಡ ಎಂಬಾತ ತನ್ನ ಮಗಳ ಗಂಡನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಭುಜಬಲ ಕರ್ಜಗಿ (34) ಎಂಬಾತ ಭಾಗ್ಯಶ್ರೀ ಜೊತೆಗೆ ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದನು. ಆದರೆ ಭಾಗ್ಯಶ್ರೀ ತಂದೆ ತಮ್ಮನಗೌಡ ಮಗಳು ಅಂತರ್ಜಾತಿ ವಿವಾಹವಾಗಿದ್ದಾಳೆ ಎಂದು ಸ್ವಂತ ಅಳಿಯನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಮ್ಮನಗೌಡನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.