ಪುತ್ತೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇಂದು ಮೃತ ಪ್ರವೀಣ್ ನೆಟ್ಟಾರು ಮತ್ತು ಮಸೂದ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪ್ರವೀಣ್ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ ನಂತ್ರ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಡಿಕೆ, “ಪ್ರವೀಣ್ ನೆಟ್ಟಾರು ಕುಟುಂಬಸ್ಥರನ್ನ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಪ್ರವೀಣ್ ಹಂತಕರಿಗೆ ಶಿಕ್ಷೆ ವಿಧಿಸಬೇಕು ಎಂದು ಹೇಳಿದ್ದಾರೆ. ಇನ್ನು ನಾನು ಸರ್ಕಾರಕ್ಕೆ ಹೇಳುತ್ತೇನೆ ಕಾಟಾಚಾರಕ್ಕೆ ತನಿಖೆ ಬೇಡ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆದ್ರೆ, ಸರ್ಕಾರ ಕಾಟಾಚಾರಕ್ಕೆ ಎನ್ಐಎ ತನಿಖೆಗೆ ವಹಿಸಿದ್ದಾರೆ. ನಮ್ಮಲ್ಲೇ ಸಮರ್ಥ ಅಧಿಕಾರಿಗಳಿದ್ದಾರೆ. ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ಎನ್ಐಎಗೆ ವಹಿಸಿದ್ದಾರೆ ಎಂದರು. ಇನ್ನು ನಮ್ಮ ಪಕ್ಷದಿಂದ ಕುಟಂಬಕ್ಕೆ 5 ಲಕ್ಷ ಪರಿಹಾರ ನೀಡಿದ್ದೇವೆ. ಇನ್ನು ಏನೇ ಸಮಸ್ಯೆ ಬಂದ್ರೂ ನನ್ನ ಗಮನಕ್ಕೆ ತರಲು ಹೇಳಿದ್ದೇನೆ” ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಳಂಜೆ ಗ್ರಾಮದ ಮೃತ ಮಸೂದ್ ಮನೆಗೆ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಮಸೂದ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತ್ರ ಕುಟುಂಬಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ನೀಡಿದರು.