ಕೆಎನ್ಎನ್ಡಿಜಿಟಲ್ ಡೆಸ್ಕ್ : ಗುಜರಾತ್ನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನ ಜಾರಿಗೆ ತರಲು ಸಮಿತಿಯೊಂದನ್ನ ರಚಿಸುವ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅನುಮೋದನೆ ನೀಡಿದ್ದಾರೆ ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಾಂಘವಿ ಶನಿವಾರ ಹೇಳಿದ್ದಾರೆ. ಅಂದ್ಹಾಗೆ, ಚುನಾವಣಾ ಆಯೋಗವು ಇನ್ನೂ ಘೋಷಿಸದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಮಿತಿಯ ಸದಸ್ಯರ ಹೆಸರುಗಳನ್ನ ಮುಖ್ಯಮಂತ್ರಿಗಳು ನಂತ್ರ ಪ್ರಕಟಿಸುತ್ತಾರೆ. ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿಯನ್ನ ರಚಿಸಲಾಗುವುದು. ಇನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಇದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಸಾಂಘವಿ ಹೇಳಿದರು.
BREAKING NEWS : ತುಮಕೂರಿನಲ್ಲಿ ಹಾಡಹಗಲೇ ಮೂವರು ಶಾಲಾ ಮಕ್ಕಳ ಕಿಡ್ನಾಪ್ ಗೆ ಯತ್ನ
ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವಿಚಾರ: ಕಾನೂನು ತಜ್ಞರ ಮೊರೆ ಹೋಗ ರಾಜ್ಯ ಸರ್ಕಾರ
‘ಅಪ್ಪು’ ಪುಣ್ಯಸ್ಮರಣೆ ದಿನ ರಾಜ್ಯದ ಹಲವೆಡೆ ಅನ್ನದಾನ : ಬಿರಿಯಾನಿ ಹಂಚಿದ ‘ಪುನೀತ್’ ಫ್ಯಾನ್ಸ್ |Puneeth Rajkumar