ನವದೆಹಲಿ : ಭಾರತೀಯ ಜನತಾ ಪಕ್ಷ (BJP) ಶುಕ್ರವಾರ (ಡಿಸೆಂಬರ್ 2) ಮಾಜಿ ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್ ಅವರನ್ನ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಘೋಷಿಸಿತು. ಅದೇ ವೇಳೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಸುನೀಲ್ ಜಾಖರ್ ಅವರಿಗೆ ಸ್ಥಾನ ನೀಡಲಾಗಿದೆ. ಇಬ್ಬರೂ ನಾಯಕರು ಬಹುಕಾಲದಿಂದ ಕಾಂಗ್ರೆಸ್’ನಲ್ಲಿದ್ದರು. ಇದಲ್ಲದೇ ಯುಪಿ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರನ್ನೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರನ್ನಾಗಿ ಮಾಡಲಾಗಿದೆ.
ಬಿಜೆಪಿಯ ಉತ್ತರಾಖಂಡ ಘಟಕದ ಮಾಜಿ ಅಧ್ಯಕ್ಷ ಮದನ್ ಕೌಶಿಕ್, ಪಕ್ಷದ ಛತ್ತೀಸ್ಗಢ ಘಟಕದ ಮಾಜಿ ಅಧ್ಯಕ್ಷ ವಿಷ್ಣುದೇವ್ ಸಾಯಿ ಮತ್ತು ಬಿಜೆಪಿಯ ಪಂಜಾಬ್ ಘಟಕದ ಮಾಜಿ ಅಧ್ಯಕ್ಷ ಮನೋರಂಜನ್ ಕಾಲಿಯಾ ಅವರನ್ನು ಪಕ್ಷವು ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ಮಾಡಿದೆ.
BIG NEWS: ‘ಮತದಾರರ ಪಟ್ಟಿ’ಯಲ್ಲಿ ‘ಅಲ್ಪಸಂಖ್ಯಾತ ಮತದಾರ’ರನ್ನು ಕೈಬಿಟ್ಟಿಲ್ಲ- ಸಿಎಂ ಬೊಮ್ಮಾಯಿ ಸ್ಪಷ್ಟನೆ