ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವ್ರು ಭಾಗಿಯಾಗಿದ್ದ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆದಿದೆ. ಆ ಗುಂಡಿನ ದಾಳಿಯಲ್ಲಿ ಸ್ವತಃ ಇಮ್ರಾನ್ ಖಾನ್ ಗಾಯಗೊಂಡಿದ್ದು, ಅವರಲ್ಲದೆ, ಇನ್ನೂ ನಾಲ್ಕು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸರು ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನ ಸಹ ಬಂಧಿಸಿದ್ದು, ಇಮ್ರಾನ್ ಖಾನ್ ಅವರನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
#UPDATE | Former Pakistan PM Imran Khan reportedly injured as shots fired near his long march container: Pakistan's ARY News reports pic.twitter.com/5QcgOtqpD9
— ANI (@ANI) November 3, 2022
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಗುಂಡಿನ ದಾಳಿಯಲ್ಲಿ ಇಮ್ರಾನ್ ಸೇರಿದಂತೆ ಕನಿಷ್ಠ 4 ಜನರು ಗಾಯಗೊಂಡಿದ್ದಾರೆ. ವಜೀರಾಬಾದ್ನ ಅಲ್ಲಾ ಹೋ ಚೌಕ್ ಬಳಿ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವ್ರ ಕಂಟೈನರ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ವರದಿ ಪ್ರಕಾರ ಇಮ್ರಾನ್ ಖಾನ್ ಕೂಡ ಗಾಯಗೊಂಡಿದ್ದು, ಅವ್ರ ಬಲಗಾಲಿನಲ್ಲಿ ಬ್ಯಾಂಡೇಜ್ ಹಾಕಲಾಗಿದೆ. ಅಂದ್ಹಾಗೆ, ಗುರುವಾರ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪ್ರತಿಭಟನಾ ಮೆರವಣಿಗೆಯ ಏಳನೇ ದಿನವಾಗಿದೆ.