ಮುಂಬೈ : ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್ಮುಖ್ ಒಂದು ವರ್ಷದ ಸೆರೆವಾಸದ ನಂತ್ರ ಇಂದು ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದರು. ಮಾಜಿ ಸಚಿವನನ್ನ ಅವರ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದರು.
ಕೇಂದ್ರೀಯ ತನಿಖಾ ದಳ ಅಥವಾ ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ 72 ವರ್ಷದ ಅವರು ಆರೋಪಿಯಾಗಿದ್ದರು. ದೇಶ್ಮುಖ್ ಅವರು ಅಕ್ಟೋಬರ್ 26ರಂದು ಜಾಮೀನು ಕೋರಿ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ನಂತರ ಸಿಬಿಐ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು.
ಅನಿಲ್ ದೇಶ್ಮುಖ್ ಅವರನ್ನು 2021 ರ ನವೆಂಬರ್ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಅವರು ರಾಜ್ಯ ಗೃಹ ಸಚಿವರಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಕೆಲವು ಪೊಲೀಸ್ ಅಧಿಕಾರಿಗಳ ಮೂಲಕ ಮುಂಬೈನ ವಿವಿಧ ಬಾರ್ ಗಳಿಂದ ₹ 4.70 ಕೋಟಿ ಸಂಗ್ರಹಿಸಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.
BIGG NEWS : ಜನವರಿ ಮಧ್ಯದಲ್ಲಿ ಕೊರೊನಾ ಪ್ರಕರಣ ಏರಿಕೆ, ಮುಂದಿನ 40 ದಿನ ನಿರ್ಣಾಯಕ ; ಆರೋಗ್ಯ ಸಚಿವಾಲಯ