ನವದೆಹಲಿ : ಐಸಿಐಸಿಐ ಬ್ಯಾಂಕ್’ನ ಮಾಜಿ ಎಂಡಿ ಮತ್ತು ಸಿಇಒ ಚಂದಾ ಕೊಚ್ಚರ್ ಮತ್ತು ದೀಪಕ್ ಕೊಚ್ಚಾರ್ ಅವರನ್ನ ಮೂರು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೇಂದ್ರೀಯ ತನಿಖಾ ದಳ (CBI) ಡಿಸೆಂಬರ್ 24 ರಂದು ಕೋರಲಿದೆ ಎಂದು ವರದಿಯಾಗಿದೆ.
“ನಾವು ಇಬ್ಬರೂ ಆರೋಪಿಗಳಿಗೆ ಸೆಕ್ಷನ್ 41 ಸಿಆರ್ಪಿಸಿ ನೋಟಿಸ್ ನೀಡಿದ್ದೇವೆ, ಆದ್ರೆ ಅವರು ಸಹಕರಿಸಲಿಲ್ಲ, ಆದ್ದರಿಂದ ನಾವು ಅವರನ್ನ ಬಂಧಿಸಿದ್ದೇವೆ” ಎಂದು ಸಿಬಿಐ ವಕೀಲರನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ಐಸಿಐಸಿಐ ಬ್ಯಾಂಕ್ ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಮಾಜಿ ಎಂಡಿ ಮತ್ತು ಸಿಇಒ ಅವರನ್ನು ಸಿಬಿಐ ಬಂಧಿಸಿದ್ದು, ರಿಮಾಂಡ್ ಪ್ರಕ್ರಿಯೆಗಾಗಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಕೊಚ್ಚರ್’ಗಳನ್ನ ಶುಕ್ರವಾರ ಏಜೆನ್ಸಿಯ ಮುಖ್ಯಕಚೇರಿಗೆ ಕರೆಸಲಾಯಿತು ಮತ್ತು ಸಂಕ್ಷಿಪ್ತ ವಿಚಾರಣೆಯ ನಂತರ ಬಂಧಿಸಲಾಯಿತು.
ಅವರು ತಮ್ಮ ಪ್ರತಿಕ್ರಿಯೆಗಳಲ್ಲಿ ನುಣುಚಿಕೊಂಡಿದ್ದಾರೆ ಮತ್ತು ತನಿಖೆಗೆ ಸಹಕರಿಸಲಿಲ್ಲ ಎಂದು ಸಿಬಿಐ ಆರೋಪಿಸಿದೆ. ಇನ್ನು ವಿಡಿಯೋಕಾನ್ ಗ್ರೂಪ್ನ ವೇಣುಗೋಪಾಲ್ ಧೂತ್ ಅವರೊಂದಿಗೆ ಕೊಚ್ಚರ್ಗಳನ್ನು ಹೆಸರಿಸಬಹುದಾದ ಪ್ರಕರಣದಲ್ಲಿ ಮೊದಲ ಚಾರ್ಜ್ಶೀಟ್ ಸಲ್ಲಿಸಲು ಏಜೆನ್ಸಿ ತ್ವರಿತ ಗತಿಯಲ್ಲಿ ಚಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
“ನನ್ನ ಹಳೆ ನಂಬರಿನ್ನೂ ಚಾಲ್ತಿಯಲ್ಲಿದೆ, ಕೋವಿಡ್ ಸಹಾಯಕ್ಕಾಗಿ ಕರೆ ಮಾಡ್ಬೋದು” ; ನಟ ಸೋನು ಸೂದ್