ನವದೆಹಲಿ : ದೆಹಲಿಯ ಅಲಿಪುರದಲ್ಲಿರುವ ಗೋದಾಮಿನ ಗೋಡೆ ಶುಕ್ರವಾರ ಕುಸಿದಿದ್ದು, ಈ ಅವಘಡದಲ್ಲಿ 6 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಹಲವರು ಸಿಕ್ಕಿಬಿದ್ದಿರುವ ಆತಂಕವಿದೆ. ಅಪಘಾತದ ವೇಳೆ ಗೋದಾಮಿನಲ್ಲಿ 20 ರಿಂದ 25 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಇನ್ನೂ ಹಲವರು ಸಮಾಧಿಯಾಗುವ ಆತಂಕವಿದ್ದು, ಪೊಲೀಸ್ ಆಡಳಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಇದುವರೆಗೆ 10 ಮಂದಿಯನ್ನ ರಕ್ಷಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ರಾಜಾ ಹರೀಶ್ ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ದೂರು ಸ್ವೀಕರಿಸಿದರೂ ಡಿಎಂ ಮತ್ತು ಎಸ್ಡಿಎಂ ಕಚೇರಿಯಲ್ಲಿ ಅಕ್ರಮ ಗೋದಾಮುಗಳ ನಿರ್ಮಾಣವನ್ನು ನಿಲ್ಲಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
Alipur wall collapse, Delhi | 5 dead, 9 injured including 2 critical cases. Debris being cleared from the site: Delhi Police pic.twitter.com/imcY7jApt5
— ANI (@ANI) July 15, 2022