ಕೆಎನ್ಎನ್ಡಿಜಿಟಲ್ ಡೆಸ್ಕ್ : ಬದಲಿ ವ್ಯಕ್ತಿಯನ್ನ ಹುಡುಕಿದ ನಂತ್ರ ಟ್ವಿಟರ್ನ ಮುಖ್ಯ ಕಾರ್ಯನಿರ್ವಾಹಕ(CEO) ಹುದ್ದೆಯಿಂದ ಕೆಳಗಿಳಿಯುವುದಾಗಿ ಎಲೋನ್ ಮಸ್ಕ್ ಮಂಗಳವಾರ ಘೋಷಿಸಿದ್ದಾರೆ.
“ಕೆಲಸವನ್ನ ತೆಗೆದುಕೊಳ್ಳಲು ಬೇರೆಯವ್ರು ಸಿಕ್ಕ ತಕ್ಷಣ ನಾನು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅದರ ನಂತರ, ನಾನು ಸಾಫ್ಟ್ವೇರ್ ಮತ್ತು ಸರ್ವರ್ಗಳ ತಂಡಗಳನ್ನ ನಡೆಸುತ್ತೇನೆ” ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
I will resign as CEO as soon as I find someone foolish enough to take the job! After that, I will just run the software & servers teams.
— Elon Musk (@elonmusk) December 21, 2022
ಟ್ವಿಟರ್’ನ್ನ 44 ಬಿಲಿಯನ್ ಡಾಲರ್ಗೆ ಖರೀದಿಸಿದ ನಂತ್ರ ಎಲೋನ್ ಮಸ್ಕ್ ಅವರು ಅಕ್ಟೋಬರ್ ಅಂತ್ಯದಲ್ಲಿ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರನ್ನ ಸಿಇಒ ಸ್ಥಾನದಿಂದ ವಜಾಗೊಳಿಸಿದರು. ಆದಾಗ್ಯೂ, ಹೊಸ ಸಿಇಒ ಹುಡುಕಾಟದ ಬಗ್ಗೆ ಟ್ವಿಟರ್ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಪ್ರಶ್ನೆ ಕೇಳಿದ ಮಸ್ಕ್.!
ಭಾನುವಾರ, ಮಸ್ಕ್ ಟ್ವಿಟರ್ ಬಳಕೆದಾರರಲ್ಲಿ ಸಮೀಕ್ಷೆಯನ್ನ ನಡೆಸಿದರು, ಅವರು ಈ ಕಂಪನಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ ಎಂದು ಕೇಳಿದರು. 1.55 ಕೋಟಿಗೂ ಹೆಚ್ಚು ಜನರು ಮತದಾನದಲ್ಲಿ ಭಾಗವಹಿಸಿದ್ದರು. ಇವರಲ್ಲಿ ಶೇ.57.5ರಷ್ಟು ಮಂದಿ ಮಸ್ಕ್ ರಾಜೀನಾಮೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು42.5 ಜನರು ಮಸ್ಕ್ ಅವರ ಪರವಾಗಿ ಮತ ಚಲಾಯಿಸಿದರು. ಸಮೀಕ್ಷೆಯ ಮತದಾನವು ಭಾನುವಾರ ಸಂಜೆ ಪ್ರಾರಂಭವಾಯಿತು ಮತ್ತು ಸೋಮವಾರ ಬೆಳಿಗ್ಗೆ ಕೊನೆಗೊಂಡಿತು. ಮತದಾನದ ಫಲಿತಾಂಶ ಏನೇ ಬಂದರೂ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಮಸ್ಕ್ ಭರವಸೆ ನೀಡಿದ್ದರು.
ನವೆಂಬರ್ 17ರಂದು, ಮಸ್ಕ್ ಅವರು ಟ್ವಿಟರ್ ಖರೀದಿಸಿದ ನಂತ್ರ ಕಂಪನಿಯಲ್ಲಿ ಪ್ರಮುಖ ಬದಲಾವಣೆಗಳನ್ನ ಮಾಡಲು ತಮ್ಮ ಹೆಚ್ಚಿನ ಸಮಯವನ್ನ ಮೀಸಲಿಡಬೇಕಾಯಿತು ಎಂದು ಹೇಳಿದ್ದರು. ಇದರಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದ, ಮಸ್ಕ್ ತನ್ನ ಹಳೆಯ ಕಂಪನಿ ಟೆಸ್ಲಾಗೆ ಕಡಿಮೆ ಸಮಯವನ್ನ ನೀಡಲು ಸಾಧ್ಯವಾಗುತ್ತದೆ. ಟ್ವಿಟ್ಟರ್ಗೆ ಹೆಚ್ಚಿನ ಸಮಯವನ್ನ ನೀಡಿರುವುದು ಟೆಸ್ಲಾ ಹೂಡಿಕೆದಾರರ ಕಾಳಜಿಯನ್ನ ಹೆಚ್ಚಿಸಿದೆ ಎಂದರು.
BIGG NEWS : 1 ನೇ ತರಗತಿ ದಾಖಲಾತಿಗೆ 6 ವರ್ಷ ಪೂರ್ಣ ಕಡ್ಡಾಯ : ರಾಜ್ಯ ಸರ್ಕಾರ ಆದೇಶ