ಬೀಜಿಂಗ್: ಚೀನಾದಲ್ಲಿ ಮತ್ತೆ ಮಾಹಾಮಾರಿ ಕೊರೊನಾ ಅಟ್ಟಹಾಸ ಶುರುಮಾಡಿದ್ದು, ಚೀನಾದ ದಕ್ಷಿಣ ಉತ್ಪಾದನಾ ಕೇಂದ್ರವಾದ ಗುವಾಂಗ ಝೌ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
BREAKING NEWS: ದೆಹಲಿ ಮದ್ಯ ನೀತಿ ಪ್ರಕರಣ: ಹೈದರಾಬಾದ್ ಮೂಲದ ಫಾರ್ಮಾ ಕಂಪನಿಯ ಮುಖ್ಯಸ್ಥ ಸೇರಿ ಇಬ್ಬರು ಅರೆಸ್ಟ್
ಚೀನಾದಾದ್ಯಂತದ ಕೊರೊನಾ ಪ್ರಕರಣಗಳು ಕೆಲ ದಿನಗಳಿಂದ ಹೆಚ್ಚಳವಾಗುತ್ತಿದ್ದು, 50 ಲಕ್ಷ ಜನಸಂಖ್ಯೆ ಇರುವ ಗುವಾಂಗ್ ಝೌ ನಗರವನ್ನು ಲಾಕ್ ಡೌನ್ ಮಾಡಲಾಗಿದೆ. ಕಳೆದ 6 ತಿಂಗಳಿನಿಂದ ಗುವಾಂಗ್ ಝೌ ನಗರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದು, ಪ್ರತಿ ದಿನ 3 ಸಾವಿರಕ್ಕೂ ಹೆಚ್ಚು ಕೋವಿಡ್ ಕೇಸ್ ಗಳು ಪತ್ತೆಯಾಗುತ್ತಿವೆ.
ಗುವಾಂಗ್ ಝೌ ನಲ್ಲಿ ನಿನ್ನೆ ಒಂದೇ ದಿನ 2,637 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.