ಬೆಂಗಳೂರು : ಪಿಎಸ್ ಐ ನೇಮಕಾತಿ ಹಗರಣದಲ್ಲಿ ಬಿಜೆಪಿ ಶಾಸಕ ಬಸವರಾಜ ದಡೇಗಸುಗೂರು ಲಂಚ ಪಡೆದ ಆರೋಪದ ಕುರಿತಂತೆ ಕಾಂಗ್ರೆಸ್ ಶಾಸಕರು ಇದೀಗ ವಿಡಿಯೋ ಬಿಡುಗಡೆ ಮಾಡಿದ್ದಾರೆ.
BIGG NEWS : 24 ತಾಸಾದರೂ ಮಸಾಲೆ ದೋಸೆ ಬಂದಿಲ್ಲ, ಇದರಲ್ಲೂ ಮೋಸ : ಕಾಂಗ್ರೆಸ್ ನಾಯಕರ ಕಾಲೆಳೆದ ತೇಜಸ್ವಿ ಸೂರ್ಯ
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಶಿವರಾಜ ತಂಗಡಗಿ, ನಿವೃತ್ತ ಪೊಲೀಸ್ ಅಧಿಕಾರಿ ಎಂ.ಪರಸಪ್ಪ ಅವರು ಶಾಸಕ ಬಸವರಾಜ ದಡೇಸಗೂರಿಗೆ ಹಣ ಕೊಡಲು ಬಂದಿದ್ದ ವಿಡಿಯೋ ಸಾಕ್ಷ್ಯವನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ವಿಧಾನಸೌಧ, ಶಾಸಕರ ಭವನದಲ್ಲಿ ಭ್ರಷ್ಟಾಚಾರದ ಡೀಲ್ ನಡೆಯುತ್ತಿದೆ. ಸೆ. 5 ರಂದು ಶಾಸಕ ದಡೇಗಸುಗೂರು ಹಾಗೂ ಪಿಎಸ್ ಐ ಅಭ್ಯರ್ಥಿಯ ತಂದೆ ಪರಸಪ್ಪ ಅವರ ಆಡಿಯೋ ವೈರಲ್ ಆಗಿತ್ತು. ಬಳಿಕ ಸೆ. 6 ರಂದು ಶಾಸಕರು ವೈರಲ್ ಆದ ಆಡಿಯೋ ನನ್ನದೇ ಅಂತ ಹೇಳಿದ್ರು. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಶಾಸಕರು ಸಚಿವರ ಬ್ರೋಕರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.