ಬೆಳಗಾವಿ : ಬೆಳಗಾವಿ ಸುವರ್ಣಸೌಧದಲ್ಲಿ ಸಾರ್ವಕರ್ ಫೋಟೋ ಅಳವಡಿಕೆ ವಿರೋಧಿಸಿ ಸುವರ್ಣಸೌಧದ ಮೆಟ್ಟಿಲುಗಳ ಮೇಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಯುತ್ತಿದೆ.
BREAKING NEWS : ಬಳ್ಳಾರಿಯಲ್ಲಿ ಭೀಕರ ರಸ್ತೆ ಅಪಘಾತ : ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸಾವು
ಸುವರ್ಣ ಸೌಧದಲ್ಲಿ ಸಾರ್ವಕರ್ ಫೋಟೋ ಅಳವಡಿಕೆಗೆ ನಮ್ಮ ವಿರೋಧವಿದೆ. ಬ್ರಿಟಿಷರ ಬಳಿ ಕ್ಷಮಾಪಣೆ ಕೇಳಿದ ವ್ಯಕ್ತಿಯ ಫೋಟೋವನ್ನು ಸುವರ್ಣಸೌಧದಲ್ಲಿ ಅಳವಡಿಕೆಗೆ ನಮ್ಮ ವಿರೋಧವಿದೆ ಎಂದು ಕಾಂಗ್ರೆಸ್ ನಾಯಕರು ಧರಣಿ ನಡೆಸುತ್ತಿದ್ದಾರೆ.
ಸುವರ್ಣಸೌಧದ ಮೆಟ್ಟಿಲುಗಳ ಮೇಲೆ ಕಾಂಗ್ರೆಸ್ ನಾಯಕರು ಮಹರ್ಷಿ ವಾಲ್ಮೀಕಿ, ಬಸವಣ್ಣ, ಶಿಶುನಾಳ ಷರೀಫ, ಜವಹಾರ್ ಲಾಲ್ ನೆಹರೂ, ಕುವೆಂಪು, ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರ ಫೋಟೋಗಳನ್ನು ಹಿಡಿದುಕೊಂಡು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.