ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಭಾರತವು ದೀರ್ಘ-ವ್ಯಾಪ್ತಿಯ ಖಂಡಾಂತರ ಕ್ಷಿಪಣಿಯನ್ನು ಉಡಾಯಿಸುವ ಯೋಜಿತ ಪರೀಕ್ಷಾರ್ಥ ಉಡಾವಣೆಗೆ ಮುಂಚಿತವಾಗಿ ಚೀನಾದ ಬೇಹುಗಾರಿಕಾ ಹಡಗು ಹಿಂದೂ ಮಹಾಸಾಗರ ಪ್ರದೇಶವನ್ನ ಪ್ರವೇಶಿಸಿದೆ ಎಂದು ವರದಿಯಾಗಿದೆ. ಚೀನಾದ ಬೇಹುಗಾರಿಕಾ ಹಡಗು ‘ಯುವಾನ್ ವಾಂಗ್ 5’ ಟ್ರ್ಯಾಕಿಂಗ್ ಮತ್ತು ಕಣ್ಗಾವಲು ಸಾಧನಗಳನ್ನ ಹೊತ್ತೊಯ್ಯುತ್ತಿದೆ ಎಂದು ತಿಳಿದುಬಂದಿದೆ.
ಭಾರತೀಯ ನೌಕಾಪಡೆಯು ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ ಗೂಢಚರ್ಯೆ ಹಡಗಿನ ಚಲನೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಹಡಗಿನ ಚಟುವಟಿಕೆಗಳ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.
ಆಗಸ್ಟ್’ ನಲ್ಲಿ ಶ್ರೀಲಂಕಾದ ಹಂಬಂಟೋಟಾ ಬಂದರಿನಲ್ಲಿ ಬಂದಿಳಿದ ಅದೇ ಹಡಗು, ಭಾರತ ಮತ್ತು ದ್ವೀಪ ರಾಷ್ಟ್ರದ ನಡುವೆ ರಾಜತಾಂತ್ರಿಕ ವಿವಾದವನ್ನು ಹುಟ್ಟುಹಾಕಿತು. ಚೀನಾದ ಸಂಶೋಧನಾ ಹಡಗು ‘ಯುವಾನ್ ವಾಂಗ್ 5’ ಅನ್ನು ಭಾರತೀಯ ಮಿಲಿಟರಿ ನೆಲೆಗಳ ಮೇಲೆ ಗೂಢಚರ್ಯೆ ಮಾಡಲು ಬಳಸಬಹುದು ಎಂದು ಭಾರತ ಪದೇ ಪದೇ ಕಳವಳ ವ್ಯಕ್ತಪಡಿಸಿದೆ.
‘ಜನಾರ್ಧನ ರೆಡ್ಡಿ’ ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ : ಸಚಿವ ಶ್ರೀರಾಮುಲು
ಅಂಬೇಡ್ಕರ್ ಹೆಸರಿನಲ್ಲಿ ಸತ್ಯ ಮರೆಮಾಚಿ ಬಿಜೆಪಿಯಿಂದ ಮೊಸಳೆ ಕಣ್ಣೀರು : ಸರಣಿ ಟ್ವೀಟ್ ನಲ್ಲಿ B.K ಹರಿಪ್ರಸಾದ್ ಕಿಡಿ