ನವದೆಹಲಿ : ಬಿಸಿಸಿಐ ಜೊತೆಗಿನ ಜರ್ಸಿ ಪ್ರಾಯೋಜಕತ್ವ ಒಪ್ಪಂದದಿಂದ ಬೈಜು ರದ್ದುಗೊಳಿಸಲು ಮುಂದಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇನ್ನು ಮಾಧ್ಯಮ ವೆಚ್ಚಗಳನ್ನು ತರ್ಕಬದ್ಧಗೊಳಿಸುವ ಪ್ರಯತ್ನಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.
ಬೈಜುವಿನ ಮಾರ್ಕೆಟಿಂಗ್ ಹೆಡ್ ಅತಿತ್ ಮೆಹ್ತಾ ಅವರು ಈ ಹಿಂದೆ, “ಬಿಸಿಸಿಐ ಅಸೋಸಿಯೇಷನ್’ಗೆ ಸಂಬಂಧಿಸಿದಂತೆ, ನಾವು ಈಗಾಗಲೇ ನಮ್ಮ ಒಪ್ಪಂದವನ್ನ ನವೀಕರಿಸಿದ್ದೇವೆ ಮತ್ತು ಅದು 2023 ರವರೆಗೆ ಮುಂದುವರಿಯುತ್ತದೆ. ಐಸಿಸಿ ಒಪ್ಪಂದವು 50 ಓವರ್ಗಳ ಕ್ರಿಕೆಟ್ ವಿಶ್ವಕಪ್ ನಂತರ 2023ರ ನವೆಂಬರ್’ನಲ್ಲಿ ಕೊನೆಗೊಳ್ಳುತ್ತದೆ” ಎಂದಿದ್ದರು.
2021ರ ಹಣಕಾಸು ವರ್ಷದಲ್ಲಿ 4,500 ಕೋಟಿ ರೂ.ಗಳ ನಷ್ಟದ ಬಗ್ಗೆ ಎಡ್ಟೆಕ್ ಮೇಜರ್ ಇತ್ತೀಚೆಗೆ ಬಹಿರಂಗಪಡಿಸಿದ ನಂತ್ರ ಸ್ಟಾರ್ಟ್ ಅಪ್ ಗಳ ಮೌಲ್ಯಮಾಪನ ಮತ್ತು ಅವುಗಳ ದೊಡ್ಡ-ಟಿಕೆಟ್ ಪ್ರಾಯೋಜಕತ್ವದ ಬಗ್ಗೆ ಚರ್ಚೆಗಳನ್ನ ಪ್ರಾರಂಭಿಸಿತ್ತು.
BIGG NEWS : ಬಿಜೆಪಿ ಸೇರ್ಪಡೆಯಾಗಲು BSY-ವಿಜಯೇಂದ್ರ ಹಣದ ಆಮಿಷ ಒಡ್ಡಿದ್ದರು : ವಿಶ್ವನಾಥ್ ಸ್ಪೋಟಕ ಹೇಳಿಕೆ
ಶಾಲೆ, ಕಾಲೇಜುಗಳಲ್ಲಿ ಹಣಕಾಸು ನಿರ್ವಹಣೆ, ಅರ್ಥಿಕ ಸಾಕ್ಷರತೆಯನ್ನು ಶಿಕ್ಷಣದ ಭಾಗವಾಗಿ- ಸಂಸದ ತೇಜಸ್ವೀ ಸೂರ್ಯ ಒತ್ತಾಯ
ಕೊಪ್ಪಳದಲ್ಲಿ ಶೀಘ್ರವೇ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ನಿರ್ಮಾಣ : ಸಿಎಂ ಬೊಮ್ಮಾಯಿ ಘೋಷಣೆ