ನೇಪಾಳ: ಫ್ರೆಂಚ್ ಸರಣಿ ಹಂತಕ, ‘ಬಿಕಿನಿ ಕಿಲ್ಲರ್’ ಎಂದು ಕರೆಯಲ್ಪಡುವ ಚಾರ್ಲ್ಸ್ ಶೋಭರಾಜ್ ಶುಕ್ರವಾರ ನೇಪಾಳ ಜೈಲಿನಿಂದ ಬಿ ಡುಗಡೆಯಾಗಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ಮಾತನಾಡಿದ ಚಾರ್ಲ್ಸ್ ಅವರ ಪತ್ನಿ ನಿಹಿತಾ ಬಿಸ್ವಾಸ್, “ಭದ್ರತಾ ಕಾರಣಗಳಿಗಾಗಿ ಅವರನ್ನು ಸಂಜೆ ವೇಳೆಗೆ ಫ್ರಾನ್ಸ್ ನಲ್ಲಿರುವ ಅವರ ಕುಟುಂಬಕ್ಕೆ ಕಳುಹಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಹೃದಯ ಶಸ್ತ್ರಚಿಕಿತ್ಸೆಯ ನಂತರ, ಅವರಿಗೆ ಕೆಲವು ಸಮಸ್ಯೆಗಳು ಇದ್ದು ಅವರಿಗೆ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು. ಆರೋಗ್ಯ ಮತ್ತು ಕುಟುಂಬ ಈಗ ಅವರ ಆದ್ಯತೆಗಳಾಗಿವೆ” ಎಂದು ಅವರು ಹೇಳಿದರು.
ಶೋಭರಾಜ್ 1970 ರ ದಶಕದಲ್ಲಿ ಥೈಲ್ಯಾಂಡ್ನಲ್ಲಿ 14 ಪ್ರವಾಸಿಗರು ಸೇರಿದಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕನಿಷ್ಠ 20 ಪ್ರವಾಸಿಗರನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಫ್ರೆಂಚ್ ಪ್ರವಾಸಿಗನಿಗೆ ವಿಷ ಉಣಿಸಿ ಇಸ್ರೇಲಿ ಪ್ರಜೆಯನ್ನು ಕೊಂದಿದ್ದಕ್ಕಾಗಿ ಅವರು ಭಾರತದಲ್ಲಿ 21 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದರು.