ನವದೆಹಲಿ : ಧೂಮಪಾನಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದ್ದು, ದೇಶದಲ್ಲಿ ಸಿಂಗಲ್ ಸಿಗರೇಟ್ ಮಾರಾಟದ ಮೇಲೆ ನಿಷೇಧ ಹೇರುವಂತೆ ಶಿಫಾರಸ್ಸು ಮಾಡಲಾಗಿದೆ. ಸಂಸತ್ತಿನ ಸ್ಥಾಯಿ ಸಮಿತಿಯು ಸಿಂಗಲ್ ಸಿಗರೇಟ್ ಮಾರಾಟವನ್ನ ನಿಷೇಧಿಸಲು ಪ್ರಸ್ತಾಪಿಸಿದ್ದು, ಇದು ತಂಬಾಕು ನಿಯಂತ್ರಣ ಅಭಿಯಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ದಿನದಿಂದ ದಿನಕ್ಕೆ ಸಿಂಗಲ್ ಸಿಗರೇಟ್ ಬಳಕೆ ಹೆಚ್ಚಾಗುತ್ತಿದ್ದು, ವಿಮಾನ ನಿಲ್ದಾಣದ ಧೂಮಪಾನ ವಲಯವನ್ನ ಮುಚ್ಚುವಂತೆಯೂ ಶಿಫಾರಸು ಮಾಡಲಾಗಿದೆ. ಇನ್ನು ಸಾಮಾನ್ಯ ಬಜೆಟ್’ನಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಸಮಿತಿಯ ಪ್ರಕಾರ, ಜಿಎಸ್ಟಿ ಜಾರಿಯಾದ ನಂತರವೂ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಹೆಚ್ಚಿನ ಹೆಚ್ಚಳವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸಾಮಾನ್ಯ ಬಜೆಟ್’ನಲ್ಲಿ ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳವಾಗುವ ಸಾಧ್ಯತೆಯಿದೆ. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್’ನ್ನ ಉಲ್ಲೇಖಿಸಿದ ಸಮಿತಿಯು ಆಲ್ಕೋಹಾಲ್ ಮತ್ತು ತಂಬಾಕು ಸೇವನೆಯು ಕ್ಯಾನ್ಸರ್ ಅಪಾಯವನ್ನ ಹೆಚ್ಚಿಸುತ್ತದೆ ಎಂದು ಹೇಳಿದೆ.
ಗುಟ್ಕಾ, ಸುವಾಸನೆಯುಕ್ತ ತಂಬಾಕು ಮತ್ತು ಮೌತ್ ಫ್ರೆಶ್ನರ್’ಗಳ ಹೆಸರಿನಲ್ಲಿ ಮಾರಾಟ ಮಾಡುವ ಉತ್ಪನ್ನಗಳನ್ನ ಸಹ ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನ ಕ್ಯಾನ್ಸರ್ ಪೀಡಿತರ ಚಿಕಿತ್ಸೆಯಲ್ಲಿ ಬಳಸಲಾಗುವುದು. ಅಲ್ಲದೇ, ಹೆಚ್ಚುವರಿ ಮೊತ್ತವನ್ನ ತಂಬಾಕಿನ ವಿರುದ್ಧ ಜಾಗೃತಿ ಮೂಡಿಸಲು ಬಳಸಬೇಕು. ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಕ್ಯಾನ್ಸರ್ ಸರ್ಜನ್ ಪಂಕಜ್ ಚತುರ್ವೇದಿ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನ ಹೆಚ್ಚಿಸುವುದರಿಂದ ಕ್ಯಾನ್ಸರ್ ಪ್ರಕರಣಗಳನ್ನ ಕಡಿಮೆ ಮಾಡಬಹುದು ಎಂದು ಹೇಳುತ್ತಾರೆ.
GOOD NEWS: ಇನ್ಮುಂದೆ ‘ವಾಟ್ಸಾಪ್’ನಲ್ಲಿ LIC ಸೇವೆಗಳು ಲಭ್ಯ!… ಇಲ್ಲಿದೆ ಸಂಪೂರ್ಣ ಮಾಹಿತಿ
ರಾಜ್ಯದಲ್ಲಿ ಅವಧಿಗೆ ಮುನ್ನವೇ ವಿಧಾನಸಭಾ ಚುನಾವಣೆ ನಡೆಯುವುದಿಲ್ಲ – ಸಚಿವ ಅಶ್ವತ್ಥನಾರಾಯಣ
ರಾಜ್ಯದಲ್ಲಿ ಅವಧಿಗೆ ಮುನ್ನವೇ ವಿಧಾನಸಭಾ ಚುನಾವಣೆ ನಡೆಯುವುದಿಲ್ಲ – ಸಚಿವ ಅಶ್ವತ್ಥನಾರಾಯಣ