ಬೆಂಗಳೂರು : ಸೈಮಾ ಅವಾರ್ಡ್ ನಂತರ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಪಾರ್ಟಿಯ ಆಯೋಜಕರು ಹಾಗೂ ಹೋಟೆಲ್ ಮ್ಯಾನೇಜರ್ ವಿರುದ್ಧ ದೂರು ದಾಖಲಾಗಿದೆ.
BIGG NEWS : ವಸತಿ ರಹಿತ ಗ್ರಾಮೀಣಾ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ಗ್ರಾ.ಪಂ.ಮಟ್ಟದಲ್ಲೇ ಫಲಾನುಭವಿಗಳ ಆಯ್ಕೆ
ಬೆಂಗಳೂರಿನ JW ಮ್ಯಾರಿಯೇಟ್ ಹೋಟೆಲ್ ನಲ್ಲಿ ಸೆಪ್ಟೆಂಬರ್ 12 ರಂದು ಪಾರ್ಟಿ ನಡೆದಿತ್ತು. ಪಾರ್ಟಿಯಲ್ಲಿ ಸ್ಟಾರ್ ನಟ-ನಟಿಯರು ಭಾಗಿಯಾಗಿದ್ದರು. ರಾತ್ರಿ 1 ಗಂಟೆಗೆ ಪಾರ್ಟಿ ಮುಗಿಸುವಂತೆ ಪೊಲೀಸರು ಸೂಚನೆ ನೀಡಿದ್ದರು. ಆದರೆ ಪಾರ್ಟಿ ಬೆಳಗಿನ ಜಾವ 3.30 ರವರೆಗೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಿದ್ದಾರೆ.
ನಿಯಮ ಉಲ್ಲಂಘಿಸಿದ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಾರ್ಟಿ ಆಯೋಜಕರು ಹಾಗೂ ಮ್ಯಾನೇಜರ್ ಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
BIGG NEWS : ವಸತಿ ರಹಿತರಿಗೆ ಗುಡ್ ನ್ಯೂಸ್ : ಒಂಟಿ ಮನೆ ಯೋಜನೆಯ ಅರ್ಜಿ ಸಲ್ಲಿಕೆ ವಿಸ್ತರಣೆ