ನವದೆಹಲಿ : ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರವು ಸುಮಾರು 13 ಲಕ್ಷ ರೈಲ್ವೆ ಉದ್ಯೋಗಿಗಳಿಗೆ ದೊಡ್ಡ ಉಡುಗೊರೆಯನ್ನ ನೀಡಿದೆ. ಭಾರತೀಯ ರೈಲ್ವೆಯು ವರ್ಗಾವಣೆ ವಿನಂತಿಗಳನ್ನು ಪ್ರಕ್ರಿಯೆಗೊಳಿಸಲು “HRMS ವರ್ಗಾವಣೆ ಮಾಡ್ಯೂಲ್” ಪ್ರಾರಂಭಿಸಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ ರೈಲ್ವೇ “CRIS ಮೂಲಕ HRMS ವರ್ಗಾವಣೆ ಮಾಡ್ಯೂಲ್ನ ಅಭಿವೃದ್ಧಿಯನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಪಾರಂಪರಿಕ ದತ್ತಾಂಶದ ಪ್ರವೇಶವನ್ನ ಪೂರ್ಣಗೊಳಿಸಿ, HRMSನ ವರ್ಗಾವಣೆ ಮಾಡ್ಯೂಲ್ 2022ರ ಇಂದಿನಿಂದ (ಆಗಸ್ಟ್ 15) ಭಾರತೀಯ ರೈಲ್ವೆಯಾದ್ಯಂತ ಪ್ರಾರಂಭಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಇದರೊಂದಿಗೆ, ಎಲ್ಲಾ ಹೊಸ ಮತ್ತು ಅಸ್ತಿತ್ವದಲ್ಲಿರುವ ವರ್ಗಾವಣೆ ವಿನಂತಿಗಳನ್ನ (ಅಂತರ ರೈಲ್ವೆ ಮತ್ತು ಅಂತರ್ ವಿಭಾಗ) ಇನ್ನು ಮುಂದೆ HRMS ಮೂಲಕ ಮಾತ್ರ ಸ್ವೀಕರಿಸಲಾಗುವುದು ಮತ್ತು ಪ್ರಕ್ರಿಯೆಗೊಳಿಸಲಾಗುವುದು ಎಂದು ತಿಳಿಸಿದೆ.
ವರ್ಗಾವಣೆ ಅರ್ಜಿಗಳ ಪ್ರಕ್ರಿಯೆಯಲ್ಲಿನ ಬದಲಾವಣೆಗೆ ಸೂಕ್ತ ಪ್ರಚಾರ ನೀಡಲು ಮತ್ತು ಆರಂಭಿಕ ಅವಧಿಯಲ್ಲಿ HRMS ಮೂಲಕ ವರ್ಗಾವಣೆ ಅರ್ಜಿಗಳನ್ನ ಸಲ್ಲಿಸುವಲ್ಲಿ ಉದ್ಯೋಗಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಹೆಲ್ಪ್ಡೆಸ್ಕ್ನ ಕಾರ್ಯನಿರ್ವಹಣೆಯನ್ನ ಖಚಿತಪಡಿಸಿಕೊಳ್ಳಲು ಎಲ್ಲಾ ಕ್ಷೇತ್ರ ಘಟಕಗಳು ಪ್ರಯತ್ನಿಸಬೇಕು ಎಂದು ಅದು ಹೇಳಿದೆ.
ರೈಲ್ವೆ ಸಚಿವಾಲಯದ ಅಧಿಸೂಚನೆಯು ವರ್ಗಾವಣೆ ಮಾಡ್ಯೂಲ್ ಬಗ್ಗೆ ಪ್ರತಿಕ್ರಿಯೆಯನ್ನ ಸಹ ಕೋರಿದೆ. “ಸುಧಾರಣೆಗಾಗಿ ಸಲಹೆಗಳನ್ನ, ಯಾವುದಾದರೂ ಇದ್ದರೆ, ಸಿಆರ್ಐಎಸ್ನೊಂದಿದೆ ತೆಗೆದುಕೊಳ್ಳಲು ರೈಲ್ವೆ ಮಂಡಳಿಯ ಗಮನಕ್ಕೆ ತರಲಾಗುತ್ತದೆ” ಎಂದು ಅದು ಹೇಳಿದೆ.