ಬೆಂಗಳೂರು : ರಾಜಕೀಯ ಮರು ಪ್ರವೇಶಕ್ಕೆ ಸಿದ್ದತೆ ನಡೆಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಇಂದು ಬೆಂಗಳೂರಿನಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದು, ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಡುವುದಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂದು ನಂಬಿದವನು ನಾನು, ಕೆಲಸವನ್ನು ನಂಬಿಕೊಂಡು ಇಲ್ಲಿಯವರೆಗೆ ನಾನು ಬಂದಿದ್ದೇನೆ. ಗ್ರಾಮಪಂಚಾಯಿತಿಯಿಂದ ಹಿಡಿದು ಬಳ್ಳಾರಿ ಜಿಲ್ಲೆಯನ್ನು ಬಿಜೆಪಿಯನ್ನಾಗಿ ಮಾಡಿರುವ ಕೀರ್ತಿ ಜನಾರ್ದನ ರೆಡ್ಡಿ ಮಾತ್ರ ಎಂದಿದ್ದಾರೆ.
2006 ರಲ್ಲಿ 20-20 ಸಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪ- ಕುಮಾರಸ್ವಾಮಿ ಇದ್ರು. ಅಧಿಕಾರದ ಹಂಚಿಕ ಆಧಾರದ ಮೇಲೆ ಸರ್ಕಾರ ರಚನೆ ಮಾಡಿದ್ದರು. ಈ ವೇಳೆ ಯಡಿಯೂರಪ್ಪ ನನ್ನನ್ನು ಕರೆದು ಬಿಜೆಪಿ ಪಕ್ಷವನ್ನು ಕಟ್ಟುವ ಸಲುವಾಗಿ ನನ್ನ ಜೊತೆಗೆ ಕೆಲಸ ಮಾಡುವಂತೆ ಕೇಳಿಕೊಂಡಿದ್ದರು. ಅದರಂತೆ ನಾನು ಕೆಲಸ ಮಾಡಿದ್ದೇನೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಲು ಬಂದಾಗ ನಿರಾಕರಿಸಿ ಶ್ರೀರಾಮುಲು ಅವರನ್ನು ಮಂತ್ರಿ ಮಾಡಲು ಹೇಳಿದ್ದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಅಭಿಯಾನಿಯಾಗಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೆ. ಆದರೆ ಬಿಜೆಪಿಯಿಂದ ನನಗೆ ಅಮಾನತು ಮಾಡಿದ್ದು, ತೀವ್ರ ನೋವಾಗಿದೆ. ಆದರೂ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.
BIGG NEWS : ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ಸಿಹಿಸುದ್ದಿ : `ವಿದ್ಯಾನಿಧಿ ಯೋಜನೆ’ ವಿಸ್ತರಣೆ