ಬಾಗಲಕೋಟೆ : ರಾಜ್ಯದಲ್ಲಿ ಒಂದು ಅಮಾನವೀಯ ಘಟನೆ ನಡೆದಿದ್ದು, ಆಗ ತಾನೇ ಜನಿಸಿದ ನವಜಾತ ಶಿಶುವನ್ನು ರಾಕ್ಷಸರು ಚರಂಡಿಗೆ ಎಸೆದು ಹೋಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಶಿರೂರು ಅಗಸಿ ಬಳಿ ನಡೆದಿದೆ.
ಹೌದು ಬಾಗಲಕೋಟೆ ಜಿಲ್ಲೆಯ ಶಿರೂರು ಅಗಸಿಯಲ್ಲಿ ಬಾಕ್ಸ್ ನಲ್ಲಿ ಪಾಪಿಗಳು ಮಗುವನ್ನು ಎಸೆದು ಹೋಗಿದ್ದರು. ಈ ವೇಳೆ ಸ್ಥಳೀಯರು ಬಾಕ್ಸ್ ನಲ್ಲಿ ಏನಿದೆ ಎಂದು ಕುತೂಹಲದಿಂದ ತೆರೆದು ನೋಡಿದಾಗ, ಮೃತಪಟ್ಟ ನವಜಾತ ಶಿಶು ಒಂದು ಪತ್ತೆಯಾಗಿದೆ. ಈ ವೇಳೆ ನವಜಾತ ಶಿಶುವನ್ನು ಕಂಡು ಸ್ಥಳೀಯರು ಮಮ್ಮಲ ಮರುಗಿದ್ದಾರೆ.ಅಲ್ಲದೆ ಶಿಶುವನ್ನು ಎಸೆದು ಹೋದವರಿಗೆ ಹಿಡಿ ಶಾಪ ಹಾಕಿದ್ದಾರೆ.
ಕೂಡಲೇ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೃತ್ಯ ಎಸಗಿದವರ ವಿರುದ್ದ ದೂರು ನೀಡಲು ಮುಂದಾದ ಅಧಿಕಾರಿಗಳು, ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.