Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಹೃದಯಾಘಾತದಿಂದ ನಿಧನ | Suuraj Hegde No More

ಲೈಂಗಿಕ ಜೀವನದಲ್ಲಿನ ಬದಲಾವಣೆಗಳು ಮೆದುಳಿನ ಗೆಡ್ಡೆಯ (Brain Tumor) ಆರಂಭಿಕ ಲಕ್ಷಣಗಳೇ?

GOOD NEWS: 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ : ಆರೋಪಿಗೆ 20 ವರ್ಷ ಜೈಲು ಶಿಕ್ಷೆ.!
KARNATAKA

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ : ಆರೋಪಿಗೆ 20 ವರ್ಷ ಜೈಲು ಶಿಕ್ಷೆ.!

By kannadanewsnow57

ಕೊಪ್ಪಳ : ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ತುಮಕೂರ ಜಿಲ್ಲೆ ಬೀರನಕಲ್ ಗ್ರಾಮ ನಿವಾಸಿ ರಮೇಶ ತಂದೆ ಮುದ್ದುರಾಮಯ್ಯ ಇತನ ಮೇಲಿನ ಆರೋಪ ಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೊ) ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿರುತ್ತಾರೆ.

ತುಮಕೂರ ಜಿಲ್ಲೆ ಬೀರನಕಲ್ ಗ್ರಾಮ ನಿವಾಸಿ ರಮೇಶ ತಂದೆ ಮುದ್ದುರಾಮಯ್ಯ ಇತನು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಇನ್ಟ್ಸಾಗ್ರಾಂ ಮೂಲಕ ಪರಿಚಯಿಸಿಕೊಂಡು ಪೋನಿನಲ್ಲಿ ಮಾತನಾಡುತ್ತ ಸಲುಗೆ ಬೆಳೆಸಿರುತ್ತಾನೆ. ಬಾಲಕಿಯ ತಾಯಿ ಕೊಪ್ಪಳದಲ್ಲಿ ವಾಸವಾಗಿರುತ್ತಾರೆ. ದಿ: 15-10-2023 ರಂದು ಬೆಳಿಗ್ಗೆ 6 ಗಂಟೆಗೆ ಬಾಲಕಿಯ ತಾಯಿ ಮನೆ ಕೆಲಸಕ್ಕೆ ಹೋದಾಗ ಬಾಲಕಿ ಮಾತ್ರ ಮನೆಯಲ್ಲಿದ್ದು ಆರೋಪಿ ರಮೇಶ ಇತನು ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಅಪ್ರಾಪ್ತ ಬಾಲಕಿಯೊಂದಿಗೆ ಸಲುಗೆಯಿಂದ ಮಾತನಾಡುತ್ತ ಮೈ ಕೈ ಮುಟ್ಟಿ ಕೈ ಹಿಡಿದು ಎಳೆದಾಡಿದಾಗ ಬಾಲಕಿ ನಿರಾಕರಿಸಿದ್ದು ನಾವಿಬ್ಬರೂ ಮುಂದೆ ಮದುವೆಯಾಗುತ್ತೇವೆ ಎಂದು ಹೇಳಿ ನಂಬಿಸಿ ಮನೆಯಲ್ಲಿ ಲೈಂಗಿಕ ಅತ್ಯಾಚಾರ ಮಾಡಿರುತ್ತಾನೆ. ನಂತರದಲ್ಲಿ ದಿ: 13-03-2024 ರಂದು ರಾತ್ರಿ 8 ಗಂಟೆ ಸುಮಾರಿಗೆ ಆರೋಪಿತನು ಬಾಲಕಿಗೆ ಪೋನ್ ಮಾಡಿ ಕೊಪ್ಪಳಕ್ಕೆ ಬಂದಿದ್ದೇನೆ ನಿನ್ನನ್ನು ನೋಡಬೇಕು ನೀನು ಮಯೂರ ಲಾಡ್ಜಗೆ ಬಾ ಎಂದು ಪದೇ ಪದೇ ಪೋನ್ ಮಾಡಿ ಪೀಡಿಸುರುತ್ತಾನೆ. ಈ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ ಮಹಿಳಾ ಪೋಲಿಸ್ ಠಾಣೆಯ ಪಿ.ಎಸ್.ಐ ನಾಗಲಿಂಗಯ್ಯ ಅವರು ದೂರು ಸ್ವೀಕರಿಸಿ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ, ಮುಂದಿನ ತನಿಖೆಯನ್ನು ಕೊಪ್ಪಳ ಮಹಿಳಾ ಪೋಲಿಸ್ ಠಾಣೆಯ ಪಿಐ ಆಂಜಿನೇಯ ಡಿ.ಎಸ್. ಅವರು ನಿರ್ವಹಿಸಿದ್ದು, ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಭಿತಾಗಿದ್ದರಿಂದ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣವು ಸ್ಪೇ.ಎಸ್ಸಿ(ಪೋಕ್ಸೊ) ಸಂ: 22/2024ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿತನ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 25,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಧೀಶರಾದ ಕುಮಾರ ಡಿ.ಕೆ ರವರು ದಿ: 5-07-2025ರಂದು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಈ ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕಾಶ ತಿಮ್ಮಾಪೂರ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಲ್ಲಿ ಸಾಕಷ್ಟು ಸಹಕರಿಸಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Rape of minor girl: Accused sentenced to 20 years in prison!
Share. Facebook Twitter LinkedIn WhatsApp Email

Related Posts

BIG BREAKING: ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಹೃದಯಾಘಾತದಿಂದ ನಿಧನ | Suuraj Hegde No More

1 Min Read

GOOD NEWS: 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

2 Mins Read

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

1 Min Read
Recent News

BIG BREAKING: ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಹೃದಯಾಘಾತದಿಂದ ನಿಧನ | Suuraj Hegde No More

ಲೈಂಗಿಕ ಜೀವನದಲ್ಲಿನ ಬದಲಾವಣೆಗಳು ಮೆದುಳಿನ ಗೆಡ್ಡೆಯ (Brain Tumor) ಆರಂಭಿಕ ಲಕ್ಷಣಗಳೇ?

GOOD NEWS: 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

State News
KARNATAKA

BIG BREAKING: ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಹೃದಯಾಘಾತದಿಂದ ನಿಧನ | Suuraj Hegde No More

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರು ಹಾಗೂ ಎಐಸಿಸಿ ಕಾರ್ಯದರ್ಶಿಯಾಗಿದ್ದ ಸೂರಜ್ ಹೆಗ್ಡೆ ಅವರು ಭಾನುವಾರ…

GOOD NEWS: 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

‘ಬಿಜೆಪಿ, ಜೆಡಿಎಸ್’ನಿಂದ ಮತ್ತೊಬ್ಬ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ಡಿಕೆಶಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.