ಬೆಂಗಳೂರು : ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ SIT ವಶದಲ್ಲಿ ಇದ್ದು, ಇಂದು ಸಂತ್ರಸ್ತ ಮಹಿಳೆ ಮುನಿರತ್ನ ವಿರುದ್ಧ ಮತ್ತೊಂದು ಸ್ಪೋಟಕ ವಾದಂತಹ ಆರೋಪ ಮಾಡಿದ್ದಾಳೆ. ಶಾಸಕ ಮುನಿರತ್ನ ನನ್ನ ಮೇಲೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಅತ್ಯಾಚಾರ ಆಗಿದ್ದಾರೆ ಎಂದು ಪೊಲೀಸರ ವಿಚಾರಣೆ ವೇಳೆ ಸಂತ್ರಸ್ತ ಮಹಿಳೆ ಸ್ಪೋಟಕವಾದ ಆರೋಪ ಮಾಡಿದ್ದಾಳೆ.
ವಿಧಾನಸೌಧವನ್ನು ಹಿಂದಿನ ಹಿರಿಯ ರಾಜಕಾರಣಿಗಳು ದೇವಸ್ಥಾನಕ್ಕೆ ಹೋಲಿಸಿದ್ದಾರೆ. ಅಲ್ಲದೆ ನ್ಯಾಯ ದೇವತೆಗೆ ಹೋಲಿಸುತ್ತಾರೆ. ಆದರೆ ಇಂಥ ಒಂದು ಪವಿತ್ರವಾದಂತಹ ಸ್ಥಳದಲ್ಲಿ ಒಬ್ಬ ಶಾಸಕರು, ಒಬ್ಬ ಜನಪ್ರತಿನಿಧಿಗಳು ಮಹಿಳೆಯ ಮೇಲೆ ಇಂತಹ ನೀಚ ಕೃತ್ಯ ನಡೆದಿರುವುದು ಜನರ ಆಕ್ರೋಶಕ್ಕೆ ಇದೀಗ ಕಾರಣವಾಗಿದೆ.
ಹೌದು ವಿಚಾರಣೆಯ ವೇಳೆ ಸ್ಪೋಟಕ ಹೇಳಿಕೆ ನೀಡಿರುವ ಸಂತ್ರಸ್ತೆ ಮಹಿಳೆ, ಪೊಲೀಸರ ಮುಂದೆ ಮಹಿಳೆ ಮಹತ್ವದ ಹೇಳಿಕೆ ನೀಡಿದ್ದಾಳೆ. ವಿಧಾನಸೌಧದ ಮೂರನೇ ಮಹಡಿ ಹಾಗೂ ವಿಕಾಸಸೌಧದ ಅವರ ಕಚೇರಿಯಲ್ಲೇ ಶಾಸಕ ಮುನಿರತ್ನ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ಸ್ಫೋಟಕವಾದ ಆರೋಪ ಮಾಡಿದ್ದಾಳೆ. ಹಾಗಾಗಿ ಶಾಸಕ ಮುನಿರತ್ನ ವಿರುದ್ಧ ಕಾನೂನಿನ ಉರುಳು ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.