ಮೈಸೂರು : ಮುಡಾ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬಹಿರಂಗವಾಗಿದ್ದು, ಸಿಎಂ ಸಿದ್ದರಾಮಯ್ಯ ಬಳಿಕ ಇಬ್ಬರು ಪ್ರಭಾವಿ ಸಚಿವರ ವಿರುದ್ಧವು ಕೂಡ ಅಕ್ರಮದ ಆರೋಪ ಕೇಳಿ ಬರುತ್ತಿದೆ. 50:50 ಅನುಪಾತದಲ್ಲಿ ಸೈಟ್ ಹಂಚಿಕೆಯ ವೇಳೆ ಪ್ರಭಾವ ಬೀರಲಾಗಿದೆ ಎನ್ನುವ ಸ್ಫೋಟಕ ವಿಚಾರ ಇದೀಗ ಬಹಿರಂಗವಾಗಿದೆ.
ಹೌದು ಸಿಎಂ ಸಿದ್ದರಾಮಯ್ಯ ಬಳಿಕ ಇಬ್ಬರು ಪ್ರಮುಖ ಸಚಿವರಿಂದಲೇ ಅಕ್ರಮಕ್ಕೆ ಸಹಕಾರ ನೀಡಲಾಗಿದೆ ಎಂದು ಇಡಿ ವಿಚಾರಣೆಯಲ್ಲಿ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಈ ಹಿಂದೆ ಮಮುಡಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಾತ್ರ ಅಲ್ಲ ಇಬ್ಬರು ಸಚಿವರು ವಿರುದ್ಧ ಕೂಡ ಅಕ್ರಮ ಸೈಟ್ ಹಂಚಿಕೆಯಲ್ಲಿ ಸಹಕಾರ ನೀಡಿರುವ ಆರೋಪ ಕೇಳಿ ಬಂದಿದೆ. ಇದೀಗ ಇಡಿ ಮಾಜಿ ಅಧಿಕಾರಿಗಳ ಹೇಳಿಕೆಯನ್ನು ಬೆನ್ನುತ್ತಿದ್ದು, ಕೆಲವು ದಾಖಲೆ ಪರಿಶೀಲನೆ ನಡೆಸಿ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.