ರಾಯಚೂರು : ರಾಯಚೂರಿನಲ್ಲಿ ಇಂದು ಘೋರ ದುರಂತ ಒಂದು ಸಂಭವಿಸಿದ್ದು, ಬಟ್ಟೆ ತೊಳೆಯಲು ಎಂದು ತಾಯಿ ಮತ್ತು ಮಗ ಇಬ್ಬರು ಕೆರೆಗೆ ಹೋಗಿದ್ದಾರೆ.ಈ ವೇಳೆ ಕಾಲು ಜಾರಿ ಮಗ ಕೆರೆಗೆ ಬಿದ್ದಿದ್ದಾನೆ. ತಕ್ಷಣ ತಾಯಿ ಆತನ ರಕ್ಷಣೆಗೆ ತಾನು ಕೂಡ ಕೆರೆಗೆ ಜಿಗಿದಿದ್ದು ಇಬ್ಬರೂ ಕೂಡ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಮಲಯಾಬಾದ್ ಗ್ರಾಮದಲ್ಲಿ ನಡೆದಿದೆ.
ಹೌದು ರಾಯಚೂರು ತಾಲೂಕಿನ ಮಲಯಾಬಾದ್ ಗ್ರಾಮದಲ್ಲಿ ತಾಯಿ ರಾಧಮ್ಮ (32) ಹಾಗೂ ಮಗ ಕೆ ಸಂಜು (5) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.ಬೆಳಿಗ್ಗೆ ಮಗನೊಂದಿಗೆ ರಾಧಮ್ಮ ಬಟ್ಟೆ ತೊಳೆಯಲು ಹೋಗಿದ್ದರು. ಇ ವೇಳೆ ಕಾಲು ಜಾರಿ ಕೆರೆಯಲ್ಲಿ ಮಗ ಸಂಜು ಬಿದ್ದಿದ್ದಾನೆ.ಮಗನನ್ನು ರಕ್ಷಿಸಲು ಹೋಗಿ ತಾಯಿ ರಾಧಮ್ಮ ಕೂಡ ಸಾವನ್ನಪ್ಪಿದ್ದಾರೆ ಯರಗೇರಾ ಪೊಲೀಸ್ ಠಾಣೆ ಎಲ್ಲಿ ಪ್ರಕರಣ ದಾಖಲಾಗಿದೆ.