ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ನಿನ್ನೆ ಬೆಂಗಳೂರಿನ ಎಚ್ ಬಿ ಆರ್ ಲೇಔಟ್ ಬಳೆ ಕಳ್ಳರಿಬ್ಬರು ಮೊಬೈಲ್ ಕದ್ದುಪರಾರಿಯಾಗಲು ಯತ್ನಿಸಿದಾಗ ಮಾಜಿ ಕಾರ್ಪೊರೇಟರ್ ಗಣೇಶ್ ರೆಡ್ಡಿ ಅವರು ಚೇಸ್ ಮಾಡಿ ಅವರ ಬೈಕ್ ಗೆ ಗುದ್ದಿ ಬೀಳಿಸಿದ್ದ ಘಟನೆ ನಡೆದಿತ್ತು. ಇದೀಗ ತಡರಾತ್ರಿ ಕೂಡ ಬೆಂಗಳೂರಿನ ಶಿವಾಜಿನಗರದಲ್ಲಿ ಮೊಬೈಲ್ ಅಂಗಡಿ ಶಟರ್ ಮುರಿದು ಲಕ್ಷಾಂತರ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದಾರೆ.
ಹೌದು ಬೆಂಗಳೂರಿನ ಶಿವಾಜಿನಗರದ ಬಳಿ ಇರು ವಿಶ್ವಾಸ್ ಕಮ್ಯುನಿಕೇಷನ್ ಎಂಬ ಮೊಬೈಲ್ ಅಂಗಡಿಯ ಶಟರ್ ಮುರಿದ ಬಳಿಕ ಮುಖಕ್ಕೆ ಮಾಸ್ಕ ಧರಿಸಿದ ಖದೀಮರು, ಸಿಸಿಟಿವಿ ಕ್ಯಾಮೆರಾದಲ್ಲಿ ತಮ್ಮ ಮುಖ ಕಾಣಬಾರದೆಂದು ಈ ರೀತಿ ಪ್ಲಾನ್ ಮಾಡಿದ್ದಾರೆ. ಈ ವೇಳೆ ಅವರು ಲಕ್ಷಾಂತರ ಮೌಲ್ಯದ ಮೊಬೈಲ್ ಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.
ಹೌದು ಬೆಂಗಳೂರಿನಲ್ಲಿ ರಾತ್ರೋರಾತ್ರಿ ಮೊಬೈಲ್ ಕಳ್ಳತನ ಮಾಡಲಾಗಿದೆ. ರಾತ್ರೋರಾತ್ರಿ ಮೊಬೈಲ್ ಅಂಗಡಿ ಲೂಟಿ ಮಾಡಿದ್ದಾರೆ. ಶೆಟರ್ ಮುರಿದು, ಮುಖ ಕಾಣದಂತೆ ಮಾಸ್ಕ್ ಧರಿಸಿ ಕಳ್ಳರು ಒಳ ನುಗ್ಗಿದ್ದಾರೆ.ಈ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ. ವಿಶ್ವಾಸ್ ಕಮ್ಯುನಿಕೇಷನ್ ಎಂಬ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.