ಜಮ್ಮು :ಜಮ್ಮು ನಗರದಲ್ಲಿ ಪಾಕಿಸ್ತಾನ ಸೇನೆಯಿಂದ ಮತ್ತೆ ಡ್ರೋನ್ ದಾಳಿ ನಡೆದಿದ್ದು, 8 ಕ್ಷಿಪಣಿಗಳನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ.
ಜಮ್ಮುವಿನಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ. ಇದಾದ ನಂತರ ಏರ್ ಸೈರನ್‌ಗಳನ್ನು ಮೊಳಗಿಸಲಾಯಿತು. ಜಮ್ಮುವಿನಲ್ಲಿ ಸಂಪೂರ್ಣ ವಿದ್ಯುತ್ ಸ್ತಬ್ಧವಾಗಿತ್ತು. ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ. ಜಮ್ಮುವಿನ ವಿವಿಧ ವಲಯಗಳಲ್ಲಿ ವಿದ್ಯುತ್ ವ್ಯತ್ಯಯ ಹೇರಲಾಗಿದೆ.
ಸ್ಫೋಟದ ಶಬ್ದದ ನಂತರ ಜಮ್ಮುವಿನಲ್ಲಿ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ. ಜಮ್ಮುವಿನಲ್ಲಿ 5-6 ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ಹೇಳಲಾಗುತ್ತಿದೆ. ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಸಾಧ್ಯತೆಯಿದೆ.
ಆಕಾಶದಲ್ಲಿ ಡ್ರೋನ್ ಕಾಣಿಸಿಕೊಂಡ ನಂತರ ಜಮ್ಮುವಿನಾದ್ಯಂತ ಎಚ್ಚರಿಕೆ ನೀಡಲಾಗಿದೆ. ಹಲವೆಡೆ ಡ್ರೋನ್ ದಾಳಿಗಳು ನಡೆದಿವೆ. ಜಮ್ಮುವಿನ ನಂತರ, ಕಾಶ್ಮೀರದ ಕುಪ್ವಾರಾದಲ್ಲಿಯೂ ಗುಂಡಿನ ದಾಳಿಯ ಸುದ್ದಿ ಇದೆ.
#WATCH | Sirens being heard in Akhnoor, Jammu and Kashmir
More details awaited. pic.twitter.com/eiGdyj14Tq
— ANI (@ANI) May 8, 2025