ಕೊಪ್ಪಳ : ಇತ್ತೀಚಿಗೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದಂತಹ ಗ್ರಹಲಕ್ಷ್ಮಿ ಯೋಜನೆಯಿಂದ ಬಂದಂತಹ ಹಣದಿಂದ ಅತ್ತೆ ಹಾಗೂ ಸೊಸೆ ಬೋರ್ವೆಲ್ ಕೊರೆಸಿದ್ದ ಸುದ್ದಿ, ಭಾರಿ ವೈರಲಾಗಿತ್ತು. ಇದಕ್ಕೆ ಸಿಎಂ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿದ್ದರು.
ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಹಿಳೆಯೊಬ್ಬರು, ಗೃಹಲಕ್ಷ್ಮಿ ಹಣ ಕೂಡಿಟ್ಟು ಮಾಂಗಲ್ಯ ಸರ ಖರೀದಿಸಿದ ಘಟನೆ ನಡೆದಿದೆ. ಹೌದು ಗಂಗಾವತಿ ತಾಲೂಕಿನ ಶ್ರೀರಾಮನಗರದ ನಿವಾಸಿಗಳಾದ ಶಂಕರಮ್ಮ ನಾಯಕ ತನಗೆ ಬರುವ ಪ್ರತಿ ತಿಂಗಳ ಹಣವನ್ನು ತನ್ನ ಅನಾಥ ಮೊಮ್ಮಗಳ ಖಾತೆಗೆ ಜಮಾ ಮಾಡುತ್ತಿದ್ದಾರೆ. ಕೆ. ನರಸಮ್ಮ ಮಾಂಗಲ್ಯ ಸರ ಖರೀದಿ ಮಾಡಿಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಿಂದ ಬರುವಂತಹ ಪ್ರತಿ ತಿಂಗಳು 2,000ಗಳನ್ನು, ಕುರಿತುಕೊಂಡು ಈ ಒಂದು ಮಾಂಗಲ್ಯ ಸರ ಮಾಡಿಸಿಕೊಂಡಿದ್ದೇನೆ. ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ತುಂಬಾ ಧನ್ಯವಾದಗಳು ಎಂದು ಶಂಕ್ರಮ್ಮ ನಾಯಕ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಗೃಹಲಕ್ಷ್ಮಿ ಹಣದಿಂದ ಮಾಂಗಲ್ಯ ಸರ ಖರೀದಿಸಿದ ಸುದ್ದಿ ತಿಳಿದು ಸಚಿವೆ, ಲಕ್ಷ್ಮಿ ಹೆಬ್ಬಾಳಕರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.