ಮಂಡ್ಯ : ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಭ್ರಷ್ಟ ಅಧಿಕಾರಿ ಚಳಿ ಬಿಡಿಸುತ್ತಿರುವ ಲೋಕಾಯುಕ್ತರು, ಏಕಕಾಲಕ್ಕೆ ಪ್ರತ್ಯೇಕ ತಂಡವಾಗಿ ಮೂರು ಕಡೆ ದಾಳಿ ಮಾಡಿದ್ದಾರೆ.
ಇನ್ನು ಮಂಡ್ಯ ನಗರಸಭೆ ಸಂಯೋಜನಾಧಿಕಾರಿ ಪುಟ್ಟಸ್ವಾಮಿ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತರು, ಸ್ವಗ್ರಾಮ ತೊರೆಚಾಕನಹಳ್ಳಿಯ ಮನೆಯ ಮೇಲೆ ದಾಳಿ ಮಾಡಿದ್ದಾರೆ.ಅದೇ ಗ್ರಾಮದಲ್ಲಿರುವ ಆಲೆಮನೆ ಮೇಲು ದಾಳಿ ಮಾಡಿದ್ದಾರೆ. ಮೈಸೂರಿನ ಅಧಿಕೃತ ನಿವಾಸದ ಮೇಲೂ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿರುವ ಆರೋಪ ಹಿನ್ನೆಲೆ ಎಲ್ಲಾ ಕಡೆಯಲ್ಲೂ ಸಂಪೂರ್ಣವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.








