ಮೈಸೂರು : ಪತಿ ಬೇರೆ ಮಹಿಳೆಯೊಂದಿಗೆ ಸಲುಗೆಯಿಂದ ಇದ್ದಿದ್ದನ್ನು ನೋಡಿ ಪತ್ನಿ ಇದಕ್ಕೆ ವಿರೋಧಿಸಿದ್ದಾಳೆ. ಇದೇ ವಿಚಾರಕ್ಕೆ ಆಗಾಗ ಪತಿ-ಪತ್ನಿ ಮಧ್ಯ ಗಲಾಟೆ ನಡೆಯುತ್ತಿತ್ತು. ಆದರೆ ಇಂದು ಗಲಾಟೆ ವಿಕೋಪಕ್ಕೆ ತಿರುಗಿ, ಪತಿ ಪತ್ನಿಯನ್ನು ಮಚ್ಚಿನಿಂದ ಭೀಕರವಾಗಿ ಕೊಲೆ ಮಾಡಿ, ಠಾಣೆಗೆ ಬಂದು ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೆಂಕಿಪುರ ಗ್ರಾಮದಲ್ಲಿ ನಡೆದಿದೆ.
ಹೌದು ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಬೆಂಕಿಪುರದಲ್ಲಿ ನಡೆದಿದೆ. ಪತ್ನಿ ರೋಜಾ (37) ಹತ್ಯೆಗೈದ ಪತಿ ಸ್ವಾಮಿನಾಯ್ಕ್. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೆಂಕಿಪುರ ಗ್ರಾಮದಲ್ಲಿ ಈ ಒಂದು ಕೊಲೆ ನಡೆದಿದೆ ಮತ್ತೊಬ್ಬ ಮಹಿಳೆಯ ಜೊತೆ ಸ್ವಾಮಿ ನಾಯ್ಕ್ ಸಲುಗೆಯಿಂದ ಇದ್ದ.
ಇದೇ ವಿಚಾರಕ್ಕೆ ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಇಂದು ಮಧ್ಯಾಹ್ನ ಮಚ್ಚಿನಿಂದ ಕೊಚ್ಚಿ ಪತ್ನಿ ರೋಜಾಳನ್ನು ಸ್ವಾಮೀ ನಾಯಕ್ ಕೊಲೆ ಬಳಿಕ, ಬಿಳಿಕೆರೆ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಬಗ್ಗೆ ಬಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.