ಹಾವೇರಿ : ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಕ್ಕೆ ಯುವಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದ್ದು, ಕಳೆದ ಜನೆವರಿ 26 ರಂದು ನಡೆದಿದ್ದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಶಶಿಧರ್ ಬೈರಾಪುರ (23) ಎಂದು ತಿಳಿದುಬಂದಿದೆ. ಮೊಬೈಲ್ ನಲ್ಲಿ ಯುವತಿ ಜೊತೆಗಿದ್ದ ಫೋಟೋ ಪತ್ತೆ ಆಗಿದ್ದು, ಈ ಹಿನ್ನೆಲೆ ಶಶಿಧರ ಸಾವಿಗೆ ಯುವತಿ ಪ್ರಚೋದನೆ ನೀಡಿದ್ದಾಳೆ ಎಂದು ಯುವತಿಯ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಪ್ರೀತಿಯ ನಾಟಕವಾಡಿ ಶಶಿಧರ್ ತಲೆ ಕೆಡಿಸಿದ ಪ್ರಿಯತಮೆ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾಳೆ. ಜನವರಿ 26 ರಂದು ಶಶಿಧರ ಆತ್ಮಕ್ಕೆ ಶರಣಾಗಿದ್ದಾನೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಶಶಿಧರ್ ಪೋಷಕರು ದೂರು ದಾಖಲಿಸಿದ್ದಾರೆ.
ಮೃತ ಶಶಿಧರ ತಾಯಿ ಹುಲಿಗೆಮ್ಮ ಅವರು ದೂರು ದಾಖಲಿಸಿದ್ದಾರೆ. ಮೊದಲು ಶಶಿಧರ್ ಆತ್ಮಹತ್ಯೆನಲ್ಲಿ ಯುಡಿಆರ್ ದಾಖಲಾಗಿತ್ತು. ಶಶಿಧರ್ ಮೊಬೈಲ್ ಪರಿಶೀಲಿಸಿದಾಗ ಪ್ರೀತಿಯ ವಿಚಾರ ಬಯಲಾಗಿದೆ. ಮೊಬೈಲಲ್ಲಿ ಇವತ್ತಿಗೆ ಫೋಟೋ ಮತ್ತು ವಿಡಿಯೋಗಳು ಪತ್ತೆಯಾಗಿವೆ. ಸಾವಿಗೆ ಪ್ರಿಯತಮೆ ಕಾರಣ ಎಂದು ಇದೀಗ ಅಟ್ರಾಸಿಟಿ ಕೇಸ್ ದಾಖಲಾಗಿದೆ.