ಬೆಂಗಳೂರು : ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ತ ಎಂದು ವಂಚಿಸಿದ್ದ ವ್ಯಕ್ತಿಯ ವಿರುದ್ಧ ಮತ್ತೊಂದು fir ದಾಖಲಾಗಿದೆ. ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು FIR ದಾಖಲಾಗಿದೆ.ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಆಧರಿಸಿ ಇದೀಗ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ರಾಜ್ಯಪಾಲರ ಸಹಿ ನಕಲು ಮಾಡಿ ವಿಟಿಯು ಕುಲಪತಿಗಳಿಗೆ ಪತ್ರ ಬರೆದಿದ್ದು ವಿದ್ಯಾರ್ಥಿಯೊಬ್ಬನಿಗೆ ವೈದ್ಯಕೀಯ ಸೀಟ್ ಮಂಜೂರು ಮಾಡುವಂತೆ ಸುಜಯೇಂದ್ರ ಎಂಬಾತ ಪತ್ರ ಬರೆದಿದ್ದಾನೆ. 2025ರಲ್ಲಿ ರಾಜ್ಯಪಾಲರ ನಕಲಿ ಸಹಿ ಮಾಡಿ ಪತ್ರ ಬರೆದಿದ್ದ. ಲೋಕಭವನದ ಲೆಟರ್ ಹೆಡ್ ದುರ್ಬಳಕೆ ಮಾಡಿದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಕಲಿ ಸಹಿ ಮಾಡಿದ್ದ ಸುಜಯೇಂದ್ರ ವಿರುದ್ಧ FIR ದಾಖಲಾಗಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಸದ್ಯ ವಿಧಾನಸೌಧ ಠಾಣೆಯಿಂದ ವಿಜಯನಗರ ಠಾಣೆಗೆ ಕೇಸ್ ವರ್ಗಾವಣೆ ಆಗಿದೆ.
ಈ ಹಿಂದೆ ಜಮ್ಮು ಕಾಶ್ಮೀರ ವೈದ್ಯರೊಬ್ಬರಿಗೆ sujayendra ವಂಚನೆ ಎಸಗಿದ್ದ. ಬರೋಬ್ಬರಿ 2.5 ಕೋಟಿ ವಂಚನೆ ಎಸಗಿದ್ದ ವಂಚನೆ ಕೇಸ್ನಲ್ಲಿ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದರು. ಸದ್ಯ ಜಾಮೀನಿನ ಮೇಲೆ ರಿಲೀಸ್ ಆಗಿದ್ದಾನೆ. ಪೊಲೀಸರ ಪರಿಶೀಲನೆ ವೇಳೆ ಮನೆಯಲ್ಲಿ ಹಲವು ಲೆಟರ್ಗಳು ಪತ್ತೆಯಾಗಿದ್ದು, ಬಳಿಕ ವಿಜಯನಗರ ಠಾಣೆ ಪೊಲೀಸ್ರು ಲೋಕಭವನಕ್ಕೆ ಪತ್ರ ಬರೆದಿದ್ದಾರೆ. ಲೋಕ ಭವನಾದ ಲೆಟರ್ ಹೆಡ್ ಅನಧಿಕೃತವಾಗಿ ದುರ್ಬಳಕೆ ಆಗಿರುವುದು ಬಳಕೆಗೆ ಬಂದಿದೆ. ನಕಲಿ ಪತ್ರಗಳು ಪತ್ತೆ ಹಿನ್ನೆಲೆಯಲ್ಲಿ ಸುಜಯೇಂದ್ರಗೆ ಪೊಲೀಸರು ನೋಟಿಸ್ ನೀಡಿದ್ದಾರೆ.








