ಮೈಸೂರು : ಮೈಸೂರಿನ ಸಿದ್ದಾರ್ಥ್ ನಗರದ ಮನೆ ಒಂದರಲ್ಲಿ ಚಿರತೆ ಒಂದು ಪ್ರತ್ಯಕ್ಷವಾಗಿದೆ. ಸಿದ್ಧಾರ್ಥ ನಗರದ ಸುರೇಶ್ ಎಂಬ ಅವರ ಮನೆಗೆ ಚಿರತೆ ನುಗ್ಗಿದೆ. ಮನೆಯಲ್ಲಿ ಅತ್ತೆ ಸೊಸೆ ಇರುವಾಗಲೇ ಚಿರತೆ ನುಗ್ಗಿದ್ದು ಆತಂಕ ಸೃಷ್ಟಿಯಾಗಿತ್ತು.
ಸುರೇಶ್ ಪತ್ನಿ ಸುಜಾತ ಹಾಗೂ ತಾಯಿ ಶೈಲಜಾ ಮನೆಯಲ್ಲಿದ್ದಾಗಲೇ ಚಿರತೆ ಮನೆಗೆ ನುಗ್ಗಿದೆ. ಶೈಲಜಾ ಮಲಗಿದ್ದ ಕೊಠಡಿ ಒಳಗೆ ಚಿರತೆ ಪ್ರವೇಶಿಸಿದೆ ಈ ವೇಳೆ ಸಮಯಪ್ರಜ್ಞೆಯಿಂದ ಅತ್ತೆ ಶೈಲಜಾರನ್ನು ಸುಜಾತ ರಕ್ಷಣೆ ಮಾಡಿದ್ದಾರೆ. ಚಿರತೆ ಮನೆಗೆ ನುಗ್ಗಿದ್ದರಿಂದ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ. ಇವಳೆ ಅರಣ್ಯ ಅಧಿಕಾರಿಗಳು ಬಂದು ಚಿರತೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.








