ಕಲಬುರ್ಗಿ : ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, ಬಳಿಕ ಲಾಡ್ಜ್ ಗೆ ಕರೆದುಕೊಂಡು ಹೋಗಿ ಯುವತಿಯ ಮೇಲೆ ಅತ್ಯಾಚಾರ ಎಸೆಗಿರುವ ಕೆ ಎಸ್ ಆರ್ ಪಿ ಪೊಲೀಸ್ ಸಿಬ್ಬಂದಿಯ ವಿರುದ್ಧ ಇದೀಗ ಸಂತ್ರಸ್ತೇ ಯುವತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ.
ಹೌದು ಅತ್ಯಾಚಾರ ಎಸಗಿರುವ KSRP ಸಿಬ್ಬಂದಿಯನ್ನು ಯಲ್ಲಾಲಿಂಗ ಮೇತ್ರಿ ಎಂದು ಹೇಳಲಾಗುತ್ತಿದ್ದು, ಇಬ್ಬರು ಸುಮಾರು ಐದು ತಿಂಗಳು ಇನ್ಸ್ಟಾಗ್ರಾಮ್ನಲ್ಲಿ ಮೇಸೆಜ್ ಮಾಡಿದ್ದಾರೆ. ಬಳಿಕ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದಾರೆ. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಆರೋಪಿ ಯಲ್ಲಾಲಿಂಗ ಸಂತ್ರಸ್ತೆಗೆ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಆರೋಪಿ ಯಲ್ಲಾಲಿಂಗನ ಮಾತನ್ನು ಸಂತ್ರಸ್ತೆ ನಂಬಿದ್ದಾಳೆ.
ಯಲ್ಲಾಲಿಂಗನ ಮಾತು ನಂಬಿ ಯುವತಿ ಹೈದರಾಬಾದ್ ನಿಂದ ಕಲಬುರ್ಗಿ ಬಂದಿದ್ದಾಳೆ.ಈ ವೇಳೆ ಕಲ್ಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಇರುವ ಲಾಡ್ಜ್ ನಲ್ಲಿ ಇಡೀ ರಾತ್ರಿ ಇವತ್ತು ಮೇಲೆ ಅತ್ಯಾಚಾರ ಗೆಸ್ಸಿದ್ದಾನೆ ಬಳಿಕ ನನಗೆ ಬೇರೆ ಕಡೆ ಡ್ಯೂಟಿ ಇದೆ ಅಲ್ಲಿ ಹೋಗಿ ಬಂದು ನಾಳೆ ಮದುವೆ ಆಗೋಣ ಎಂದು ಹೇಳಿ ಆಕೆಯನ್ನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಬಳಿಕ ಯುವತಿ ಎಲ್ಲಾ ಲಿಂಗನಿಗೆ ಹಲವಾರು ಬಾರಿ ಫೋನ್ ಮಾಡಿದರೆ ಸಹ ಸಂಪರ್ಕಕ್ಕೆ ಸಿಗಲಿಲ್ಲ. ಹೇಗೋ ಪ್ರಯತ್ನ ಪಟ್ಟು ಎಲ್ಲಾ ಲಿಂಗನನ್ನ ಸಂಪರ್ಕಿಸಿದಾಗ, ನನಗೆ ನೀವು ವರದಕ್ಷಣೆ ಹೆಚ್ಚಿಗೆ ಕೊಟ್ಟರೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆ.ಇದರಿಂದ ನೊಂದ ಸಂತ್ರಸ್ತೆ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿ ಯಲ್ಲಾಲಿಂಗ ವಿರುದ್ಧ ಬಿಎನ್ಎಸ್ ಕಾಯ್ದೆ 64,318(B)351,352 ಅಡಿಯಲ್ಲಿ ಕೇಸ್ ದಾಖಲಾಗಿದೆ.