ಕೋಲಾರ : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕಿಯ ಭೀಕರವಾಗಿ ಕೊಲೆಯಾಗಿದ್ದು, ಶಿಕ್ಷಕಿಯ ಕತ್ತು ಕೊಯ್ದು ಅತ್ಯಂತ ಬರ್ಬರವಾಗಿ ಹತ್ಯೆಗೈಯಲಾಗಿದೆ. ಮುಳಬಾಗಿಲಿನ ಮುತ್ಯಾಲಪೇಟ್ ಲೇಔಟ್ ನಲ್ಲಿ ಈ ಒಂದು ಆಘಾತಕಾರಿ ಘಟನೆ ನಡೆದಿದೆ.
ಕತ್ತು ಕೊಯ್ದು ಶಿಕ್ಷಕಿಯನ್ನು ಮೂವರು ಹಂತಕರು ಕೊಲೆ ಮಾಡಿದ್ದಾರೆ, ಮುಳಬಾಗಿಲಿನ ಮುತ್ಯಾಲಪೇಟ್ ಲೇಔಟ್ ನಲ್ಲಿ ಈ ಒಂದು ಆಘಾತಕಾರಿ ಘಟನೆ ನಡೆದಿದೆ. ಕತ್ತು ಕೊಯ್ದು ಶಿಕ್ಷಕಿ ದೇವಿಶ್ರೀ (42) ಬರ್ಬರವಾಗಿ ಕೊಲೆಯಾಗಿದ್ದಾರೆ. ಮನೆಯಲ್ಲಿ ಮಗಳ ಜೊತೆ ಇದ್ದಾಗಲೇ ಶಿಕ್ಷಕಿಯ ಕೊಲೆಯಾಗಿದೆ. ಈ ವೇಳೆ ಹಂತಕರು ಮಗಳನ್ನು ಕೂಡ ಹತ್ಯೆಗೈಯಲು ಪ್ರಯತ್ನಿಸಿದ್ದು ಆದರೆ ಅದೃಷ್ಟವಶಾತ್ ಆಕೆ ಬಚಾವಾಗಿದ್ದಾಳೆ.
ಕೊಲೆಯಾದ ದಿವ್ಯಶ್ರೀ ಮುಡಿಯನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಉದ್ಯಮಿ ಪದ್ಮನಾಭ ಪತ್ನಿ ಕೂಡ ತಿಳಿದುಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಹಾಗೂ ಕೋಲಾರ ಎಸ್ಪಿ ನಿಖಿಲ್ ಬಿ ಭೇಟಿ ನೀಡಿದ್ದಾರೆ. FSL ತಂಡದ ಅಧಿಕಾರಿಗಳು ಕೂಡ ಸ್ಥಳದಲ್ಲಿ ಭೇಟಿ ನೀಡಿ ಪರಿಶೀಲನೇ ನಡೆಸುತ್ತಿದೆ. ಶಿಕ್ಷಕಿ ಕೊಲೆಯಿಂದ ಮುಳಬಾಗಿಲು ಜನರು ಬೆಚ್ಚಿ ಬಿದ್ದಿದ್ದಾರೆ.