ಪಂಜಾಬ್ : ಪಂಜಾಬಿನ ಅಮೃತ್ ಸರದಲ್ಲಿರುವ ಗೋಲ್ಡನ್ ಟೆಂಪಲ್ ನಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದ್ದು, ಅಕಾಲಿ ದಳ ನಾಯಕ ಹಾಗೂ ಪಂಜಾಬ್ ನ ಮಾಜಿ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಖಾಲಿಸ್ತಾನಿ ಒಬ್ಬ ಬಂದೂಕಿನಿಂದ ಫೈರಿಂಗ್ ಮಾಡಿದ್ದು ಅವರನ್ನು ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಹೌದು ಸುಖ್ಬೀರ್ ಸಿಂಗ್ ಬಾದಲ್ ಗುಂಡಿಕ್ಕಿ ಹತ್ಯೆಗೆ ಯತ್ನ ನಡೆದಿದ್ದು, ಖಾಲಿಸ್ತಾನಿ ಬೆಂಬಲಿತ ವ್ಯಕ್ತಿಯಿಂದ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ನಾರಾಯಣ ಸಿಂಗ್ ಚೌರಾ ಎನ್ನುವ ವ್ಯಕ್ತಿಯಿಂದ ಹತ್ಯೆಗೆ ಯತ್ನಿಸಲಾಗಿದೆ. ಪಂಜಾಬ್ ನ ಗೋಲ್ಡನ್ ಟೆಂಪಲ್ ಗೆ ತೆರಳುತ್ತಿದ್ದಾಗ ಈ ಒಂದು ಘಟನೆ ನಡೆದಿದೆ.
ದಾಳಿ ನಡೆದ ತಕ್ಷಣ ಸುಖ್ಬೀರ್ ಸಿಂಗ್ ಬಾದಲ್ ಬೆಂಬಲಿಗರು ನಾರಾಯಣ ಸಿಂಗ್ ನನ್ನು ತಡೆದಿದ್ದಾರೆ.ಪಂಜಾಬಿನ ಗೋಲ್ಡನ್ ಟೆಂಪಲ್ ನಲ್ಲಿ ಗುಂಡಿನ ಸದ್ದಿಗೆ ಸ್ಥಳೀಯ ಜನರು ಸಹಜವಾಗಿ ಬೆಚ್ಚಿ ಬಿದ್ದಿದ್ದಾರೆ. ಕೂಡಲಿ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಯಾವ ಕಾರಣಕ್ಕೆ ಹತ್ಯೆಗೆ ಯತ್ನಿಸಲಾಗಿದೆ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.