ಬೆಂಗಳೂರು : ಕಳೆದ 2022 ಜೂನ್ ನಿಂದ 2023 ಜುಲೈ ವರೆಗೆ ಪ್ರಾಥಮಿಕ ಶಾಲೆಗೆ ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಇಡೀ ದೇಶದಲ್ಲಿ ನಮ್ಮ ಕರ್ನಾಟಕ ರಾಜ್ಯವು ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ ವರದಿಯಲ್ಲಿ ತಿಳಿಸಿದೆ.
ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಸಿಎಎಂಎಸ್) ವರದಿ ಪ್ರಕಾರ, 2022ರ ಜೂನ್‌ನಿಂದ – 2023ರ ಜುಲೈ ನಡುವೆ 6 ರಿಂದ 10 ವರ್ಷದವರೆಗಿನ ಮಕ್ಕಳು ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆಯುವುದರಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 1 ರಿಂದ 5ನೇ ತರಗತಿವರೆಗೆ ಶೇ.97.4ರಷ್ಟು ಮಕ್ಕಳು ದಾಖಲಾಗಿದ್ದಾರೆ.
ಕರ್ನಾಟಕದಲ್ಲಿ ಶೇ.64.4 ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಿದ್ದರೆ, ಶೇ.10.1 ರಷ್ಟು ಮಕ್ಕಳು ಅನುದಾನಿತ, ಶೇ.25.5 ರಷ್ಟು ಮಕ್ಕಳು ಖಾಸಗಿ ಹಾಗೂ ಶೇ. 0.3 ರಷ್ಟು ಇತರೆ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ ವರದಿಯಲ್ಲಿ ತಿಳಿಸಿದೆ.
ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಸಿಎಎಂಎಸ್) ವರದಿ ಪ್ರಕಾರ, 2022ರ ಜೂನ್‌ನಿಂದ – 2023ರ ಜುಲೈ ನಡುವೆ 6 ರಿಂದ 10 ವರ್ಷದವರೆಗಿನ ಮಕ್ಕಳು ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆಯುವುದರಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 1 ರಿಂದ 5ನೇ ತರಗತಿವರೆಗೆ ಶೇ.97.4ರಷ್ಟು ಮಕ್ಕಳು ದಾಖಲಾಗಿದ್ದಾರೆ.
ಕರ್ನಾಟಕದಲ್ಲಿ ಶೇ.64.4 ರಷ್ಟು… pic.twitter.com/vet8Pf47aS
— DIPR Karnataka (@KarnatakaVarthe) November 13, 2024