ನವದೆಹಲಿ : ಅಮೆರಿಕನ್ ಪೈಲೆಟ್ ಹುಡುಕಲು ಬಂದಿದ್ದ ಮತ್ತೊಂದು ವಿಮಾನ ಪತನವಾಗಿದೆ. ಅಮೆರಿಕದ ಮತ್ತೊಂದು ವಿಮಾನವನ್ನು ಇರಾನ್ ಪಡೆದು ಹಾಕಿದೆ ದಕ್ಷಿಣ ಇಸ್ಫಹಾನ ಎಂಬಲ್ಲಿ ಅಮೇರಿಕಾದ ಮತ್ತೊಂದು ವಿಮಾಮ ಪತನವಾಗಿದೆ.
ಇನ್ನು ಇನ್ನೊಂದು ಕಡೆ ನಾಪತ್ತೆಯಾಗಿದ್ದ ಅಮೆರಿಕದ ಎರಡನೇ ಪೈಲೆಟ್ ನನ್ನು ರಕ್ಷಣೆ ಮಾಡಲಾಗಿದೆ. ಭಾರಿ ಗುಂಡಿನ ಚಕಮಕಿಯ ಬಳಿಕ ಅಮೆರಿಕ ಕಮಾಂಡೊಗಳಿಂದ ಪೈಲೆಟ್ ಅನ್ನು ರಕ್ಷಣೆ ಮಾಡಲಾಗಿದೆ. ಅಮೆರಿಕಾದ F-15E ಜೆಟ್ ಅನ್ನು ಇರಾನ್ ಹೊಡೆದುರುಳಿಸಿತ್ತು. ಪ್ಯಾರಾಚೂಟ್ ಮೂಲಕ ಇಬ್ಬರು ಪೈಲೆಟ್ ಗಳು ಜಿಗಿದಿದ್ದರು. ನಿನ್ನೆ ಓರ್ವ ಪೈಲೆಟ್ ಅನ್ನು ರಕ್ಷಿಸಿದ್ದೇವೆ. ಎಂದು ಅಮೆರಿಕ ಹೇಳಿತ್ತು. ಇದೀಗ ಇಂದು ಅಮೆರಿಕ ಕಮಾಂಡಗಳು ಮತ್ತೊಬ್ಬ ಪೈಲಟ್ ನನ್ನ ರಕ್ಷಣೆ ಮಾಡಿದ್ದಾರೆ.








