ಬೆಂಗಳೂರು : ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ತಡರಾತ್ರಿ ಭಾರತ ಪಾಕಿಸ್ತಾನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಒಂದು ಕ್ಷಿಪಣಿ ದಾಳಿಯಿಂದ 100ಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದಾರೆ. ಇದೀಗ ಭಾರತ ಸಮರಾಭ್ಯಾಸ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಇದೀಗ ಬ್ಲಾಕ್ ಔಟ್ ಅಣುಕು ಪ್ರದರ್ಶನ ನಡೆಸಿದೆ.
ಹೌದು ಪಾಕಿಸ್ತಾನ ವಿರುದ್ಧ ಭಾರತ ಸಮರಾಭ್ಯಾಸ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಬ್ಲಾಕ್ ಔಟ್ ಅಣುಕು ಪ್ರದರ್ಶನ ನಡೆಸಿದೆ. ಬ್ಲ್ಯಾಕ್ ಔಟ್ ಮಾಡಿ ಎಲ್ಲಾ ಕಡೆಗೂ ಏಕ ಕಾಲದಲ್ಲಿ ವಿದ್ಯುತ್ ಸ್ಥಗಿತಗೊಳಿಸಿ ಬ್ಲ್ಯಾಕ್ ಔಟ್ ಅಣುಕು ಪ್ರದರ್ಶನ ಮಾಡಲಾಯಿತು.
ದೆಹಲಿ, ಬಿಹಾರ್ ಹಾಗು ಉತ್ತರಪ್ರದೇಶದಲ್ಲೂ ಬ್ಲಾಕ್ ಔಟ್ ಅಣುಕು ಪ್ರದರ್ಶನ ಮಾಡಲಾಗಿದ್ದು, ಬೆಂಗಳೂರಿನ ಹಲಸೂರಿನ ಮಾತ್ರ ಬ್ಲಾಕ್ ಔಟ್ ಮಾಡಲಾಗಿದೆ. ಹಲಸೂರಲ್ಲಿ ಬ್ಲಾಕ್ ಔಟ್ ಗೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರ ಹಿನ್ನೆಲೆ ಅಲ್ಲಿ ಮಾತ್ರ ಬ್ಲ್ಯಾಕ್ ಔಟ್ ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಕಾರಣಕ್ಕೆ ಹಲಸೂರಲ್ಲಿ ಮಾತ್ರ ಬ್ಲಾಕ್ ಔಟ್ ಅಣುಕು ಪ್ರದರ್ಶನ ಮಾಡಲಾಗಿದೆ.