ಮಂಡ್ಯ : ಮಂಡ್ಯದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಹೆಲ್ಮೆಟ್ ತಪಾಸಣೆಗಾಗಿ ಪೊಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ ಬೈಕ್ ಸವಾರ ಬಿದ್ದ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಡ್ಯ ಸಂಚಾರಿ ಠಾಣೆಯ ಮೂವರು ASI ಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಹೌದು ಇಂದು ಮಂಡ್ಯದಲ್ಲಿ ಹೆಲ್ಮೆಟ್ ತಪಾಸಣೆಗಾಗಿ ಪೊಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ ಬೈಕ್ ಸವಾರ ಬಿದ್ದ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇದೀಗ ಈ ಕೇಸ್ ಗೆ ಸಂಬಂಧಿಸಿದಂತೆ ಸಂಚಾರಿ ಠಾಣೆಯ ಮೂರು ASI ಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಎಎಸ್ಐಗಳಾದ ಜಯರಾಮ್ ನಾಗರಾಜ್ ಮತ್ತು ಗುರುದೇವ್ ಅಮಾನತುಗೊಳಿಸಲಾಗಿದೆ ಎಂದು ಮಂಡ್ಯ ಜಿಲ್ಲೆಯ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡೆ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ?
ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ವಾಣಿ-ಅಶೋಕ್ ದಂಪತಿಯ ಮೂರುವರೆ ವರ್ಷದ ಮಗು ಹೃತೀಕ್ಷಳಿಗೆ ನಾಯಿ ಕಡಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಸಂಚಾರಿ ಪೊಲೀಸರು ಹೆಲ್ಮೆಟ್ ತಪಾಸಣೆ ವೇಳೆ ಆಯತಪ್ಪಿ ಬೈಕ್ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಘಟನೆ ಮಂಡ್ಯದ ನಂದ ಸರ್ಕಲ್ ಬಳಿ ಹೆಲ್ಮೆಟ್ ತಪಾಸಣೆಗಾಗಿ ಸಂಚಾರಿ ಪೊಲೀಸರು ಬೈಕ್ ನಲ್ಲಿ ಬರುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿದ್ದಾರೆ. ಏಕಾಏಕಿ ಬ್ರೇಕ್ ಹಾಕುತ್ತಿದ್ದಂತೆ ಬೈಕ್ ಸವಾರ ಆಯತಪ್ಪಿ ಕೆಳಗೆ ಬೀದ್ದಿದ್ದಾನೆ. ಬೈಕ್ ನಲ್ಲಿದ್ದ ಆತನ ಪತ್ನಿ ಹಾಗೂ ಮಗು ಕೂಡ ಕೆಳಗೆ ಬಿದ್ದಿದ್ದು, ಮಗುವಿನ ತಲೆ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆಯನ್ನು ಕಣ್ಣಾರೆ ಕಂಡ ಸಾರ್ವಜನಿಕರು ಆಘಾತಗೊಂಡಿದ್ದಾರೆ.