ಕಲಬುರ್ಗಿ : ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ವಂಚಿಸುತಿದ್ದವರನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಕಲ್ಬುರ್ಗಿ ನಗರದಲ್ಲಿ ಅಂತರಾಜ್ಯ ಇಬ್ಬರೂ ವಂಚಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರೇಮಶಾಮ ಕುಮಾರ್ ಹಾಗೂ ಗಣೇಶ್ ಕುಮಾರ್ ರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಿರುದ್ಯೋಗಿಗಳನ್ನು ಟಾರ್ಗೆಟ್ ಮಾಡಿ ಇಬ್ಬರು ವಂಚನೆ ಮಾಡುತ್ತಿದ್ದರು.
ಬಂಧಿತ ಆರೋಪಿಗಳಾದ ಪ್ರೇಮ್ ಮತ್ತು ಗಣೇಶ್ ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಉದ್ಯೋಗ ಕೊಡಿಸುವುದಾಗಿ ವಂಚನೆ ಎಸಗಿದ್ದಾರೆ. 5 ಲಕ್ಷ ಹಣ ಕೊಟ್ಟರೆ ನೌಕರಿ ಕೊಡಿಸುವುದಾಗಿ ನಿರುದ್ಯೋಗಿ ಯುವಕ ಯುವತಿಯರಿಗೆ ನಂಬಿಸಿ ವಂಚನೆ ಎಸಗಿದ್ದು, ಕಲ್ಬುರ್ಗಿಯಲ್ಲಿ ನೌಕರಿ ಕೊಡುಸುವುದಾಗಿ ವಂಚನೆಗೆ ಮುಂದಾಗಿದ್ದರು.ಆದರೆ ಇದೀಗ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.








