ಬೆಂಗಳೂರು : 2016 ಜೂನ್ 15 ರಂದು ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದೆ. ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಕೋರ್ಟ್ ಶಿಕ್ಷ ಪ್ರಮಾಣ ಪ್ರಕಟಿಸಲಿದೆ.
10 ವರ್ಷಗಳ ನಿರಂತರ ತನಿಖೆ, ವಿಚಾರಣೆ ಬಳಿಕ ಜನಪ್ರತಿನಿಧಿಗಳ ಕೋರ್ಟ್ ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯನಾಶ, ಮಾರಕಾಸ್ತ್ರಗಳಿಂದ ಹಲ್ಲೆ, ಅಕ್ರಮ ಕೂಟ ಆರೋಪದಡಿ ದೋಷಿ ಎಂದು ಆದೇಶಿಸಿದೆ. ಅದರಂತೆ ಪ್ರಕರಣ ಸಂಬಂಧ ಇಂದು ಶಿಕ್ಷೆ ಪ್ರಮಾಣವನ್ನು ಪ್ರಕಟ ಮಾಡಲಿದೆ. ಆರೋಪಿಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯೋ ಅನ್ನೋದು ಕೋರ್ಟ್ ಆದೇಶದತ್ತ ಚಿತ್ತ ನೆಟ್ಟಿದೆ.
ಇನ್ನು ನಿನ್ನೆ ಕೋರ್ಟ್ ನಲ್ಲಿ ಜಡ್ಜ್ ತೀರ್ಪು ಪ್ರಕಟಿಸುತ್ತಿದ್ದಂತೆ ಶಾಸಕ ವಿನಯ್ ಕುಲಕರ್ಣಿ ಹಾಗೂ ಅವರ ಮೂವರು ಮಕ್ಕಳು ಕೋರ್ಟ್ನಲ್ಲಿ ಕಣ್ಣೀರು ಹಾಕಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿನಯ್ ಕುಲಕರಣಿ ಹೇಳುವುದಕ್ಕೆ ಏನು ಇಲ್ಲ ಕಾನೂನಿಗೆ ತಲೆಬಾಗಲೇ ಬೇಕು ಎಂದು ಬೇಸರದಿಂದ ನುಡಿದರು. ಕೋರ್ಟ್ ತೀರ್ಪಿನ ಬಳಿಕ ಸಿಬಿಐ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಇನ್ನು ಜೈಲಾಧಿಕಾರಿಗಳು ಇಂದು ವಿನಯ್ ಕುಲಕರ್ಣಿಗೆ ಸಜಾಬಂಧಿ ನಂಬರ್ ನೀಡಲಿದ್ದಾರೆ.
ಈ ಒಂದು ಪ್ರಕರಣದಲ್ಲಿ 21 ಆರೋಪಿಗಳ ಪೈಕಿ A1 ಹಾಗು A17 ಮಾಫಿ ಸಾಕ್ಷಿಯಾಗಿದ್ದಾರೆ. A2 ವಿಕ್ರಂ ಬಳ್ಳಾರಿ, A3 ಕೀರ್ತಿ ಕುಮಾರ್ ಬೆಳ್ಳಟ್ಟಿ, A4 ಸಂದೀಪ್ ಸವದತ್ತಿ, A5 ವಿನಾಯಕ್ ಕಟಗಿ, A6 ಮಹಾಬಲೇಶ್ವರ ಹೊಂಗಲ, A7 ಸಂತೋಷ ಸವದತ್ತಿ, A8 ದಿನೇಶ್, A9 ಅಶ್ವಥ್ A10 ಸುನಿಲ್, A11 ನಜೀರ್ ಅಹಮದ್, A12 ಶಾನವಾಜ್, A13, ನೂತನ್ A14 ಹರ್ಷಿತ್ ಸಿ A15 ವಿನಯ್ ಕುಲಕರ್ಣಿ, A16 ಚಂದ್ರಶೇಖರ್ ಇಂಡಿ, A18 ವಿಕಾಸ್ ಕಲ್ಬುರ್ಗಿ, A19 ಚನ್ನಕೇಶವ ಟಿಂಗರೀಕರ, A20 ವಾಸುದೇವ ನೀಲಿಕೆನಿ, A21 ಸೋಮಶೇಖರ್ ನ್ಯಾಮಗೌಡ.








