ಬೆಂಗಳೂರು : ಬೆಂಗಳೂರಿನಲ್ಲಿ ಯುವತಿಯ ಜೊತೆಗೆ ಆಟೋ ಚಾಲಕ ಕಿರಿಕ್ ಮಾಡಿಕೊಂಡಿದ್ದಾನೆ. ಯುವತಿಯ ಆಮೇಲೆ ಆಟೋ ಚಾಲಕ ಹಲ್ಲಿಗೆ ಯತ್ನಿಸಿದ್ದಾನೆ ಅವಾಚ್ಯ ಶಬ್ದಗಳಿಂದ ಯುವತಿಯನ್ನು ಆಟೋ ಚಾಲಕ ನಿಂದಿಸಿರುವ ಘಟನೆ ವರದಿಯಾಗಿದೆ. ಯುವತಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು ಕೂಡ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಪದೇಪದೇ ಹಲ್ಲೆ ಮಾಡಿದ್ದಾನೆ.
ಉಬರ್ ಆಟೋ ಚಾಲಕ ಈ ಒಂದು ಕೃತ್ಯ ಎಸಗಿದ್ದು, ಅಕ್ಟೋಬರ್ 2ರಂದು ನಡೆದಂತಹ ಘಟನೆ ತಡವಾಗಿ ಬಳಕೆಗೆ ಬಂದಿದೆ ಅಕ್ಟೋಬರ್ 2ರ ಸಂಜೆ 7.30 ರ ಸುಮಾರಿಗೆ ಈ ಒಂದು ಘಟನೆ ನಡೆದಿದೆ ಅವಾಚ್ಯವಾಗಿ ನಿಂದಿಸಿ ಯುವತಿಯ ಮೇಲೆ ಹಲ್ಲೆಗೂ ಆಟೋ ಚಾಲಕ ಮುಂದಾಗಿದ್ದಾನೆ.
2 ಆಪ್ ನಲ್ಲಿ ಯುವತಿ ಆಟೋ ಬುಕ್ ಮಾಡಿದ್ದಾಳೆ. ಪಿಕಪ್ ಮಾಡಲು ಎರಡು ಆಟೋಗಳು ಒಟ್ಟಿಗೆ ಬಂದಿವೆ ಈ ಪೈಕಿ ಒಂದು ಆಟೋ ಮಾತ್ರ ಆಯ್ಕೆ ಮಾಡಿದ್ದಳು . ಇದರಿಂದ ರೊಚ್ಚಿಗೆದ್ದ ಚಾಲಕ ಯುವತಿಗೆ ಅವಾಚ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ಗೆ ಅಪ್ಲೋಡ್ ಮಾಡಿದ್ದಾಳೆ. ಉಬರ್ ಸಂಸ್ಥೆಗು ದೂರು ಕೊಟ್ಟಿದ್ದಾಳೆ.