ಕಲಬುರ್ಗಿ : ಕಲಬುರ್ಗಿ : ಅಬಕಾರಿ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷದ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು ಅಲ್ಲದೆ ಸಚಿವ ಆರ್ ಬಿ ತಿಮ್ಮಾಪುರ್ ರಾಜೀನಾಮೆಗೂ ಕೂಡ ಆಗ್ರಹಿಸಿದ್ದರು. ಇದೀಗ ಸರ್ಕಾರದ ಮತ್ತೊಂದು ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ.
ಹೌದು ಕಲ್ಬುರ್ಗಿ ಆರ್‌ಟಿಓ ಕಚೇರಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ಇಲ್ಲಿ ದುಡ್ಡು ಕೊಟ್ಟರೆ ಎಲ್ಲಾ ದಾಖಲೆಗಳು ಸಿಗುತ್ತವೆ. ದುಡ್ಡು ಕೊಟ್ಟರೆ ವಾಹನದ RC ಕಾರ್ಡ್ ಸೇರಿದಂತೆ ಎಲ್ಲ ದಾಖಲೆಗಳನ್ನು ಸಿಕ್ಕ ಸಿಕ್ಕವರಿಗೆ ಹಂಚಲಾಗುತ್ತದೆ. ಇದೀಗ ಈ ಒಂದು ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಸಿಬ್ಬಂದಿಗಳೊಂದಿಗೆ ಮಾತನಾಡಿದ್ದು, ಮೊಬೈಲಲ್ಲಿ ವಿಡಿಯೋ ಮಾಡುವಾಗ ಈಗ ಮಾತನಾಡಿ ನೋಡಣ, ನನ್ನ ಕೆಲಸ ಏನಿದೆ ನಾನು ಮಾಡುತ್ತೇನೆ. ನಿಮ್ಮದೇನಿದೆ ನೀವು ಮಾಡಿ ಅಂತ ಹೇಳಿದಾಗ, ಸಿಬ್ಬಂದಿಯೊಬ್ಬ ನಾನು ಯಾವಾಗ ತಿರುಗಿ ಬೀಳುತ್ತೇನೆ ಗೊತ್ತಿಲ್ಲ. ಸುಮ್ಮನೆ ಹೆದರಿಸುತ್ತಿದ್ದರೆ ಅಂತ ಎಷ್ಟು ಹೆದರಲು ಆಗುತ್ತದೆ?ಒಂದು ಲೆವೆಲ್ ಗೆ ಹೆದರಬಹುದು ಇನ್ನು ಹೆದರಲ್ಲ ನಾನು ಎಂದು ಅವಾಜ್ ಹಾಕಿದ್ದಾನೆ.








